ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ: ನಾಲ್ವರು ಮಹಿಳಾ ಅಭ್ಯರ್ಥಿಗಳತ್ತ ಎಲ್ಲರ ಚಿತ್ತ
ಕೊಹಿಮಾ: ನಾಗಾಲ್ಯಾಂಡ್ ವಿಧಾನಸಭೆಗೆ ಹೊಸ ಶಾಸಕರ ಆಯ್ಕೆಗೆ ಸೋಮವಾರ ಮತದಾನ ನಡೆಯುತ್ತಿದ್ದು, ಈಶಾನ್ಯ ರಾಜ್ಯದಲ್ಲಿ ಶಾಸಕಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಪ್ರಯತ್ನಕ್ಕಿಳಿದಿರುವ ನಾಲ್ವರು ಮಹಿಳಾ ಅಭ್ಯರ್ಥಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ರಾಜ್ಯದಲ್ಲಿ ಎಲ್ಲಾ ಪ್ರಮುಖ ಸಾಮಾಜಿಕ ವಿಷಯಗಳಲ್ಲಿ ಮಹಿಳೆಯರು ನಾಯಕತ್ವವಹಿಸಿದ್ದರೂ ರಾಜ್ಯ ಈ ತನಕ ಮಹಿಳಾ ಶಾಸಕಿಯನ್ನು ಪಡೆದಿಲ್ಲ ಎಂದು ಸಾಮಾಜಿಕ ವೀಕ್ಷಕರು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಒಟ್ಟು 13,17,632 ಮತದಾರರಲ್ಲಿ ಮಹಿಳಾ ಮತದಾರರ ಸಂಖ್ಯೆ 6,56,143 ಅಥವಾ ಶೇ.49.8. ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನಾಲ್ವರು ಮಹಿಳಾ ಅಭ್ಯರ್ಥಿಗಳೆಂದರೆ: ದಿಮಾಪುರ್-III ಕ್ಷೇತ್ರದಲ್ಲಿ ಎನ್‌ಡಿಪಿಪಿಯ ಹೆಖಾನಿ ಜಖಲು, ಟೆನಿಂಗ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರೋಸಿ ಥಾಂಪ್ಸನ್, ವೆಸ್ಟರ್ನ್ ಅಂಗಮಿ ಕ್ಷೇತ್ರದಲ್ಲಿ ಎನ್‌ಡಿಪಿಪಿಯ ಸಲ್ಹೌಟುವೊನುವೊ ಹಾಗೂ ಅಟೊಯಿಜು ಕ್ಷೇತ್ರದಲ್ಲಿ ಬಿಜೆಪಿಯ ಕಹುಲಿ ಸೆಮಾ.