×
Ad

ಅರಸಿನ ಬೆಲೆ ಪಾತಾಳಕ್ಕೆ: ಮಧ್ಯಪ್ರವೇಶಕ್ಕೆ ರೈತರ ಆಗ್ರಹ

Update: 2023-02-27 09:46 IST

ಮೈಸೂರು: ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ ಅರಸಿನದ ಬೆಲೆ ಗಣನೀಯವಾಗಿ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಅರಸಿನಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸದಿರುವುದು ಮತ್ತು ತಮಿಳುನಾಡು ಮಾರುಕಟ್ಟೆಯಲ್ಲಿನ ಪ್ರಕ್ಷುಬ್ಧತೆ, ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂದು ರೈತರು ಹೇಳಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಒಂದು ಬೆಳೆ ಒಂದು ಜಿಲ್ಲೆ ಯೋಜನೆಯಡಿ ಅರಸಿನವನ್ನು ಮೌಲ್ಯವರ್ಧನೆ ಮತ್ತು ತಾಂತ್ರಿಕ ನೆರವಿಗಾಗಿ ಚಾಮರಾಜನಗರ ಜಿಲ್ಲೆಗೆ ಆಯ್ಕೆ ಮಾಡಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಕ್ವಿಂಟಲ್‌ಗೆ 8,000 ದಿಂದ 10 ಸಾವಿರ ರೂಪಾಯಿ ಇದ್ದ ಅರಸಿನದ ಬೆಲೆ 4 ರಿಂದ 6 ಸಾವಿರಕ್ಕೆ ಕುಸಿದಿದೆ ಎಂದು ಅರಸಿನ ಬೆಳೆಗಾರ ಹಾಗೂ ಪ್ರಗತಿಪರ ರೈತ ಹೊನ್ನೂರು ಪ್ರಕಾಶ್ ಹೇಳುತ್ತಾರೆ.

"ಈ ಬಾರಿ ಭಾರಿ ಮಳೆಯ ಕಾರಣದಿಂದ ಅರಸಿನ ಇಳುವರಿ ಕೂಡಾ ಕಡಿಮೆಯಾಗಿದೆ. ಆದಾಗ್ಯೂ ನಾವು ಬೆಳೆದ ಬೆಳೆಗೆ ಬೇಡಿಕೆ ಇಲ್ಲ" ಎಂದು ಅವರು ವಿವರಿಸಿಸುತ್ತಾರೆ. ಒಂದು ಕ್ವಿಂಟಲ್ ಅರಸಿನಕ್ಕೆ 17500 ರೂಪಾಯ ಬೆಲೆ ಸಿಕ್ಕಿದರೆ ನಮಗೆ ಲಾಭವಾಗುತ್ತದೆ. ಆದರೆ ಮಾರುಕಟ್ಟೆ ಇದೀಗ ಸಂಪೂರ್ಣ ಕುಸಿದಿದೆ" ಎನ್ನುವುದು ಅವರ ಅಭಿಪ್ರಾಯ.

ಮೈಸೂರು ಹಾಗೂ ಚಾಮರಾಜ ನಗರದಲ್ಲಿ ಬೆಳೆದ ಬಹುತೇಕ ಅರಸಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಾಗಿ ತಮಿಳುನಾಡಿಗೆ ಸರಬರಾಜು ಆಗುತ್ತದೆ. ಅರಸಿನದ ಬೆಲೆ ತಮಿಳುನಾಡು ಮಾರುಕಟ್ಟೆಯಲ್ಲಿ ಅದರಲ್ಲೂ ಪ್ರಮಖವಾಗಿ ಈರೋಡ್ ಮಾರುಕಟ್ಟೆಯಲ್ಲಿನಿರ್ಧಾರವಾಗುತ್ತದೆ. ಈ ಬಾರಿ ಅಲ್ಲಿಯೂ ದರ ಕಡಿಮೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ಪ್ರಕಾಶ್ ಹೇಳುತ್ತಾರೆ.

Similar News