×
Ad

ದೇಶವನ್ನು ಉದ್ವಿಗ್ನತೆಯಲ್ಲಿರಿಸಲು ಬಯಸುವಿರಾ?: ಐತಿಹಾಸಿಕ ಸ್ಥಳಗಳ ಮರುನಾಮಕರಣ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಅರ್ಜಿದಾರ ಬಿಜೆಪಿ ನಾಯಕನನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು

Update: 2023-02-27 16:11 IST

ಹಿಂದು ಎಂಬುದು ಒಂದು ಧರ್ಮವಲ್ಲ ಬದಲು ಜೀವನದ ವಿಧಾನ ಎಂದ ನ್ಯಾಯಾಲಯ

ಹೊಸದಿಲ್ಲಿ: "ಆಕ್ರಮಣಕಾರರ" ಹೆಸರುಗಳನ್ನು ನೀಡಲಾಗಿದೆಯೆನ್ನಲಾದ ಎಲ್ಲಾ ನಗರಗಳ ಮತ್ತು ಐತಿಹಾಸಿಕ ಸ್ಥಳಗಳನ್ನು ಮರುಹೆಸರಿಸಲು ಮರುಹೆಸರಿಸುವಿಕೆ ಆಯೋಗವನ್ನು ರಚಿಸುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್‌ ಉಪಾಧ್ಯಾಯ (BJP leader Ashwini Kumar Upadhyay) ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ಇಂದು ವಜಾಗೊಳಿಸಿದೆ.

ಈ ಪಿಐಎಲ್‌ ಉದ್ದೇಶವನ್ನು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಬಿ ವಿ ನಾಗರತ್ನ ಅವರ ಪೀಠಾ ಪ್ರಶ್ನಿಸಿದೆಯಲ್ಲದೆ ಅದು ದೇಶವನ್ನು ಉದ್ವಿಗ್ನತೆಯಲ್ಲಿರಿಸಬಹುದಾದ ವಿಷಯಗಳಿಗೆ ಮರುಜೀವ ನೀಡಬಹುದು ಎಂದು ಹೇಳಿದೆ.

ದೇಶದ ಇತಿಹಾಸವು ಅದರ ಪ್ರಸ್ತುತ ಮತ್ತು ಭವಿಷ್ಯದ ತಲೆಮಾರುಗಳನ್ನು ಬಾಧಿಸಬಾರದು ಎಂದೂ ಸುಪ್ರೀಂ ಕೋರ್ಟ್‌ ಪೀಠ ಹೇಳಿದೆ.

"ಹಿಂದು ಎಂಬುದು ಒಂದು ಧರ್ಮವಲ್ಲ ಬದಲು ಜೀವನದ ವಿಧಾನ. ಅಲ್ಲಿ ಧರ್ಮಾಂಧತೆಗೆ ಅವಕಾಶವಿಲ್ಲ. ಕೇವಲ ಸಾಮರಸ್ಯ ಕೆಡಿಸಬಹುದಾದ ಗತಕಾಲದ ವಿಚಾರಗಳನ್ನು ಕೆದಕಬೇಡಿ," ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ವಿದೇಶಿ ಆಕ್ರಮಣಕಾರರಿಂದ ಮರುಹೆಸರು ನೀಡಲ್ಪಟ್ಟ ನಗರಗಳು ಮತ್ತು ಸ್ಥಳಗಳಿಗೆ ಅವುಗಳ ಮೂಲ ಹೆಸರುಗಳನ್ನು ಇಡುವ ಪ್ರಯತ್ನಕ್ಕೆ ಆಯೋಗ ರಚಿಸಬೇಕೆಂದು ಅರ್ಜಿದಾರರು  ಹೇಳಿದ್ದರು.

ಸರ್ಕಾರ ಇತ್ತೀಚೆಗೆ ಮುಘಲ್‌ ಗಾರ್ಡನ್‌ ಅನ್ನು ಅಮೃತ್‌ ಉದ್ಯಾನ್‌ ಎಂದು ಮರುಹೆಸರಿಸಿದ್ದರೂ  ಆಕ್ರಮಣಕಾರರ ಹೆಸರು ನೀಡಲಾಗಿರುವ ರಸ್ತೆಗಳನ್ನು ಮರುಹೆಸರಿಸಲು ಅದು ಕ್ರಮಕೈಗೊಂಡಿಲ್ಲ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ದೂರಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ಜಾಹೀರಾತಿನಲ್ಲಿ ಕಾಣೆಯಾದ ಮೌಲಾನಾ ಆಝಾದ್ ಭಾವಚಿತ್ರ:‌ ಪಕ್ಷದಿಂದ ಕ್ಷಮೆಯಾಚನೆ

Similar News