×
Ad

ಹೈದರಾಬಾದ್‌ ಸೆಂಟ್ರಲ್‌ ವಿವಿ ವಿದ್ಯಾರ್ಥಿ ಯೂನಿಯನ್‌ ಚುನಾವಣೆ: ಎಡ-ಅಂಬೇಡ್ಕರೈಟ್ಸ್‌ ಮೈತ್ರಿಕೂಟಕ್ಕೆ ಜಯ

HCUಗೆ ಮೊದಲ ಬಾರಿ ದಲಿತ ತೃತೀಯ ಲಿಂಗಿ ಅಧ್ಯಕ್ಷರಾಗಿ ಆಯ್ಕೆ

Update: 2023-02-27 18:42 IST

ಹೈದರಾಬಾದ್‌: ಇತ್ತೀಚೆಗೆ ನಡೆದ ಹೈದರಾಬಾದ್‌ ಸೆಂಟ್ರಲ್‌ ಯುನಿವರ್ಸಿಟಿ (HCU) ಚುನಾವಣೆಯಲ್ಲಿ ಎಡ-ಅಂಬೇಡ್ಕರೈಟ್ಸ್‌ ಮೈತ್ರಿ ಕೂಟ ಜಯಭೇರಿ ಬಾರಿಸಿದೆ. ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ, ಅಂಬೇಡ್ಕರ್‌ ಸ್ಟೂಡೆಂಟ್ಸ್‌ ಅಸೋಸಿಯೇಶನ್‌ ಮತ್ತು ದಲಿತ್‌ ಸ್ಟೂಡೆಂಟ್ಸ್‌ ಯೂನಿಯನ್‌ ಈ ಮೈತ್ರಿಯ ಭಾಗವಾಗಿವೆ. ಫೆಬ್ರವರಿ 24 ರಂದು ನಡೆದ ಚುನಾವಣೆಯಲ್ಲಿ ಎಲ್ಲಾ ಒಂಬತ್ತು ಹುದ್ದೆಗಳೂ ಮೈತ್ರಿಕೂಟದ ಪಾಲಾಗಿವೆ.

ಅರ್ಹ ವಿದ್ಯಾರ್ಥಿ ಮತದಾರರ ಪೈಕಿ ಶೇ 76ರಷ್ಟು ಮಂದಿ ಮತ ಚಲಾಯಿಸಿದ್ದರು. ವಿವಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ  ಇಬ್ಬರು 'ಎಲ್‌ಜಿಬಿಟಿಕ್ಯು' ಸಮುದಾಯದ ವಿದ್ಯಾರ್ಥಿಗಳು ಗೆದ್ದಿದ್ದಾರೆ. ದಲಿತ ಸಮುದಾಯದ ಪ್ರಜ್ವಲ್‌ ಗಾಯಕ್ವಾಡ್‌ ಯೂನಿಯನ್‌ ಅಧ್ಯಕ್ಷರಾದರೆ, ದಲಿತ ಮಂಗಳಮುಖಿ ಹೃತಿಕ್‌ ಲಕ್ಷ್ಮಣ್‌ ಲಲನ್‌ ಅವರು ಐಸಿಸಿ-ಜಿಎಸ್‌ಸಿಎಎಸ್‌ಎಚ್‌ ಚುನಾವಣೆಯಲ್ಲಿ ಜಯ ಗಳಿಸಿದರು.

ವಿವಿ ಚುನಾವಣೆಯಲ್ಲಿ ಮೊದಲ ಬಾರಿಗೆ ಒಬ್ಬ ದಲಿತ್‌ ತೃತೀಯ ಲಿಂಗಿ, ದಲಿತ ಮಂಗಳಮುಖಿ, ಕ್ರೈಸ್ತ ಮತ್ತು ಆದಿವಾಸಿ ಮಹಿಳೆಯೊಬ್ಬರು ಚುನಾವಣೆಯಲ್ಲಿ ಒಂಬತ್ತು ಪ್ರಮುಖ ಹುದ್ದೆಗಳಿಗೆ ಸ್ಪರ್ಧಿಸಿದ್ದರು.

ಉಪಾಧ್ಯಕ್ಷ ಹುದ್ದೆಯಲ್ಲಿ ಎಬಿವಿಪಿ-ಒಎಸ್‌ಸಿಎಫ್-ಎಸ್‌ಎಲ್‌ವಿಡಿಯ ಅಭ್ಯರ್ಥಿಯನ್ನು ಪೃಥ್ವಿ ಸಾಯಿ ಸೋಲಿಸಿದ್ದರು. ಪ್ರಧಾನ ಕಾರ್ಯದರ್ಶಿಯಾಗಿ ಕೃಪಾ ಮರಿಯಾ ಜಾರ್ಜ್‌ ಮತ್ತು ಜಂಟಿ ಕಾರ್ಯದರ್ಶಿಯಾಗಿ ಕತಿ ಗಣೇಶ್‌ ಆಯ್ಕೆಯಾದರು.

ಇದನ್ನೂ ಓದಿ: ಅದಾನಿ ಶೇರುಗಳನ್ನು ಖರೀದಿಸಿ ದೇಶಪ್ರೇಮ ಸಾಬೀತು ಪಡಿಸಿ ಕೇಸರಿ ಚೆಡ್ಡಿಗಳೇ: ಟ್ರೋಲಿಗರಿಗೆ  ಮಹುವಾ ಮೊಯಿತ್ರಾ ಸವಾಲು

Similar News