ಕಲ್ಯಾಣ ಯೋಜನೆಗಳ ಮೂಲಕ ಸರಕಾರ ವಂಚಿತ ಸಮುದಾಯಗಳನ್ನು ತಲುಪುತ್ತಿದೆ: ಪ್ರಧಾನಿ ಮೋದಿ

Update: 2023-02-27 16:55 GMT

ಹೊಸದಿಲ್ಲಿ, ಫೆ. 27: ವಂಚಿತ ಸಮುದಾಯಗಳನ್ನು ತಲುಪಲು ಉತ್ತಮ ಆಡಳಿತದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ(Narendra Modi), ಅಂತಹ ಆಡಳಿತದಲ್ಲಿ ತಾರತಮ್ಯ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದರು.

ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಸಮಾಜದ ವಂಚಿತ ಸಮುದಾಯಗಳನ್ನು ತಲುಪುವ ಸರಕಾರದ ಪ್ರಯತ್ನದ ಬಗ್ಗೆ ಗಮನ ಸೆಳೆದ ಪ್ರಧಾನಿ ಅವರು, ಪಶ್ಮಂಡ ಮುಸ್ಲಿಮರು ಹಿಂದುಳಿದಿರುವುದನ್ನು ಒತ್ತಿ ಹೇಳಿದರು. ‘‘ಕೊನೆಯ ಮೈಲು ತಲುಪುತ್ತಿದೆ’’ ಕುರಿತ ಬಜೆಟೋತ್ತರ ವೆಬಿನಾರ್ನಲ್ಲಿ ಮಾತನಾಡಿದ ಪ್ರಧಾನಿ, ಬುಡಕಟ್ಟು ಜನರಲ್ಲಿರುವ ಅತಿ ಬಡವರಿಗಾಗಿ ತನ್ನ ಸರಕಾರ ವಿಶೇಷ ಯೋಜನೆ ಆರಂಭಿಸುತ್ತಿದೆ ಎಂದರು. ದೇಶದ 200 ಜಿಲ್ಲೆಗಳು ಹಾಗೂ 22,000ಕ್ಕೂ ಅಧಿಕ ಗ್ರಾಮಗಳಲ್ಲಿರುವ ನಮ್ಮ ಬುಡಕಟ್ಟು ಜನರಿಗೆ ವಿವಿಧ ಸೌಲಭ್ಯಗಳನ್ನು ಶೀಘ್ರ ಒದಗಿಸಬೇಕಾಗಿದೆ.

ಅದೇ ರೀತಿ ನಮ್ಮ ಅಲ್ಪಸಂಖ್ಯಾತರಲ್ಲಿ, ವಿಶೇಷವಾಗಿ ಮುಸ್ಲಿಮರಲ್ಲಿ ಪಶ್ಮಂಡ ಮುಸ್ಲಿಮರಿದ್ದಾರೆ. ಸ್ವಾತಂತ್ರ ಸಿಕ್ಕಿ ಹಲವು ವರ್ಷಗಳು ಕಳೆದರೂ ಅವರು ಇಂದು ಕೂಡ ಹಿಂದುಳಿದಿದ್ದಾರೆ. ಆದುದರಿಂದ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದು ಪ್ರಧಾನಿ ಅವರು ಹೇಳಿದರು. 

Similar News