×
Ad

ವಿಶ್ವದ ನಂ.1 ಟೆಸ್ಟ್ ಬೌಲರ್ ಆಗಿ ಹೊರ ಹೊಮ್ಮಿದ ಆರ್. ಅಶ್ವಿನ್

Update: 2023-03-01 16:01 IST

ಹೊಸದಿಲ್ಲಿ:  ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(Ashwin) ಅವರು ಬುಧವಾರದಂದು ಎರಡು ಸ್ಥಾನ ಮೇಲಕ್ಕೇರಿ  ಐಸಿಸಿ ಬೌಲರ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ.

ಅಶ್ವಿನ್ ಅವರು ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕಿ ಟೆಸ್ಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ದಿಲ್ಲಿಯಲ್ಲಿ ನಡೆದ ನಾಲ್ಕು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ  ವಿರುದ್ಧ ಭಾರತವು ಆರು ವಿಕೆಟ್‌ಗಳ ಅಂತರದಿಂದ ಗೆದ್ದಿರುವ ಪಂದ್ಯದಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ ನಂತರ ಆಫ್-ಸ್ಪಿನ್ನರ್ ಎರಡು ಸ್ಥಾನ  ಮೇಲಕ್ಕೆತ್ತಿದ್ದಾರೆ.

ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ನ್ಯೂಝಿಲ್ಯಾಂಡ್  ವಿರುದ್ಧ ಇಂಗ್ಲೆಂಡ್ ಒಂದು ರನ್‌ನಿಂದ ಸೋತ ನಂತರ ಆ್ಯಂಡರ್ಸನ್ ಎರಡನೇ ಸ್ಥಾನಕ್ಕೆ ಕುಸಿದರು.

36 ವರ್ಷದ ಅಶ್ವಿನ್ 2015 ರಲ್ಲಿ ಮೊದಲ ಬಾರಿ  ಟೆಸ್ಟ್ ಬೌಲರ್‌ಗಳಲ್ಲಿ ಅಗ್ರ ಸ್ಥಾನ ಪಡೆದಿದ್ದರು. ನಂತರ ಹಲವಾರು ಸಂದರ್ಭಗಳಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ.

ಪ್ರಸ್ತುತ ತವರು ನೆಲದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಪರ  ಉಳಿದ ಎರಡು ಟೆಸ್ಟ್‌ಗಳಲ್ಲಿ ಉತ್ತಮವಾಗಿ ಆಡಿದರೆ ಅಶ್ವಿನ್ ಗೆ ನಂ.1 ಸ್ಥಾನ  ಉಳಿಸಿಕೊಳ್ಳಲು ಅವಕಾಶವಿದೆ.

Similar News