×
Ad

ಜಿ20 ಸಮಾರಂಭಕ್ಕೆ ಇಡಲಾಗಿದ್ದ ಹೂಕುಂಡಗಳ ಕಳವು ಪ್ರಕರಣ: ಗುರುಗ್ರಾಮದ ರಿಯಲ್ ಎಸ್ಟೇಟ್ ಡೀಲರ್ ಬಂಧನ

Update: 2023-03-01 19:11 IST

ಗುರುಗ್ರಾಮ: ಜಿ-20 ಶೃಂಗಸಭೆಗೂ ಮುನ್ನ ಆ ಪ್ರದೇಶವನ್ನು ಚಂದಗಾಣಿಸಲು ಇಡಲಾಗಿದ್ದ ಹೂಕುಂಡ ಕದ್ದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿರುವುದರಿಂದ ಗುರುಗ್ರಾಮದ ರಿಯಲ್ ಎಸ್ಟೇಟ್ ಡೀಲರ್ ಒಬ್ಬರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು  hindustantimes.com ವರದಿ ಮಾಡಿದೆ.

ಶಂಕಿತ ಆರೋಪಿಯಯನ್ನು ಹಳೇ ಗುರುಗ್ರಾಮದ ಸೆಕ್ಟರ್-11ರ ಗಾಂಧಿನಗರ ನಿವಾಸಿ ಮನಮೋಹನ್ ಯಾದವ್ (55) ಎಂದು ಗುರುತಿಸಲಾಗಿದ್ದು, ಆತ ರಿಯಲ್ ಎಸ್ಟೇಟ್ ಡೀಲರ್ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೂರ್ವ ವಲಯದ ಉಪ ಪೊಲೀಸ್ ಆಯುಕ್ತ ವೀರೇಂದ್ರ ವಿಜ್, ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ವಿಡಿಯೊದ ನೆರವಿನಿಂದ ಶಂಕಿತ ಆರೋಪಿಯ ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

"ನಾವು ಕಳವಾಗಿದ್ದ ಸಸ್ಯಗಳನ್ನು ಹೂಕುಂಡದ ಸಮೇತ ವಶಪಡಿಸಿಕೊಂಡಿದ್ದೇವೆ. ಇದರೊಂದಿಗೆ ಕಿಯಾ ಕಾರ್ನಿವಲ್ ಕಾರನ್ನೂ ವಶಪಡಿಸಿಕೊಳ್ಳಲಾಗಿದ್ದು, ಈ ಕಾರು ಯಾದವ್ ಪತ್ನಿಯ ಹೆಸರಲ್ಲಿ ನೋಂದಣಿಯಾಗಿದೆ. ಹೂಕುಂಡಗಳನ್ನು ಏಕೆ ಕಳವು ಮಾಡಲಾಯಿತು ಎಂಬ ಬಗ್ಗೆ ಆತನನ್ನು ವಿಚಾರಣೆಗೊಳಪಡಿಸಲಾಗುವುದು" ಎಂದೂ ಹೇಳಿದ್ದಾರೆ.

Similar News