×
Ad

2021-22ನೇ ಸಾಲಿನಲ್ಲಿ ಬಿಜೆಪಿಯ ಆದಾಯ ಶೇ. 154.82ರಷ್ಟು ಹೆಚ್ಚಳ: ADR

Update: 2023-03-01 20:36 IST

ಹೊಸದಿಲ್ಲಿ: ಖಾಸಗಿ ಚುನಾವಣಾ ನಿಗಾ ಸಂಸ್ಥೆ ಪ್ರಜಾಸತ್ತಾತ್ಮಕ ಸುಧಾರಣಾ ಒಕ್ಕೂಟದ ಪ್ರಕಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ, 2021-22ನೇ ಸಾಲಿನಲ್ಲಿ ಆಡಳಿತಾರೂಢ ಬಿಜೆಪಿಯ ಆದಾಯ ಶೇ. 154.82ರಷ್ಟು ಏರಿಕೆಯಾಗಿದ್ದು, ರೂ. 1917.12 ಕೋಟಿ ತಲುಪಿದೆ. ಈ ಆದಾಯದಲ್ಲಿ ಶೇ. 54ರಷ್ಟು ಪಾಲು ವಿವಾದಾತ್ಮಕ ಚುನಾವಣಾ ಬಾಂಡ್ ಮೂಲಕವೇ ಬಂದಿದೆ ಎಂದು ತನ್ನ ವಿಶ್ಲೇಷಣೆಯಲ್ಲಿ ಹೇಳಿದೆ ಎಂದು deccanherald.com ವರದಿ ಮಾಡಿದೆ.

ಪ್ರಜಾಸತ್ತಾತ್ಮಕ ಸುಧಾರಣಾ ಒಕ್ಕೂಟದ ವಿಶ್ಲೇಷಣೆಯು ಹಲವಾರು ಆಸಕ್ತಿಕರ ಸಂಗತಿಗಳನ್ನು ಬೆಳಕಿಗೆ ತಂದಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ಆದಾಯ ಶೇ.‌633.36ರಷ್ಟು ಏರಿಕೆಯಾಗುವ ಮೂಲಕ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಅನ್ನೂ ಹಿಂದಿಕ್ಕಿದೆ. ಈ ಪೈಕಿ ಶೇ. 96.77ರಷ್ಟು ಆದಾಯ ಚುನಾವಣಾ ಬಾಂಡ್ ಮೂಲಕವೇ ಹರಿದು ಬಂದಿದೆ ಎಂದು ಹೇಳಲಾಗಿದೆ.

ಈ ವರದಿಯು ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಎನ್‌ಸಿ‌ಪಿಗಳು ಪಡೆದಿರುವ ದೇಣಿಗಗಳ ಪೈಕಿ ಶೇ. 55.09 ಅಥವಾ ರೂ. 1,811.94 ಕೋಟಿ ಮೊತ್ತ ಚುನಾವಣಾ ಬಾಂಡ್‌ಗಳ ಮೂಲಕವೆದ ಹರಿದು ಬಂದಿದೆ. ಆದರೆ, ಸಿಪಿಐಎಂ, ಸಿಪಿಐ, ಬಿಎಸ್‌ಪಿ ಮತ್ತು ಎನ್‌ಪಿಪಿ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ಯಾವುದೇ ಆದಾಯ ಗಳಿಸಿಲ್ಲ ಎಂದು ಹೇಳಿದೆ.

Similar News