ಪಶ್ಚಿಮ ಬಂಗಾಳ ಉಪ ಚುನಾವಣೆ: ಟಿಎಂಸಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಗೆ ಮುನ್ನಡೆ
Update: 2023-03-02 13:04 IST
ಕೋಲ್ಕತಾ: ಐದು ಸುತ್ತುಗಳ ಮತ ಎಣಿಕೆಯ ನಂತರ ಪಶ್ಚಿಮಬಂಗಾಳ ಸಾಗರ್ದಿಘಿ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರನ್ ಬಿಸ್ವಾಸ್ ಅವರು ಸಮೀಪದ ಪ್ರತಿಸ್ಪರ್ಧಿ ಟಿಎಂಸಿ ಅಭ್ಯರ್ಥಿ ದೇಬಾಶಿಸ್ ಬ್ಯಾನರ್ಜಿಗಿಂತ 5,000 ಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.
ಟಿಎಂಸಿ ಅಭ್ಯರ್ಥಿ ದೇಬಾಶಿಸ್ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ಅವರ ದೂರದ ಸಂಬಂಧಿಯಾಗಿದ್ದು. ಬಿಜೆಪಿ ದಿಲೀಪ್ ಸಹಾ ಅವರನ್ನು ಕಣಕ್ಕಿಳಿಸಿತ್ತು.
ಕಾಂಗ್ರೆಸ್ ಅಭ್ಯರ್ಥಿ ಬಿಸ್ವಾಸ್ ಅವರಿಗೆ ಎಡರಂಗ ಬೆಂಬಲ ನೀಡಿತ್ತು. ಬಿಸ್ವಾಸ್ ಗೆದ್ದರೆ ವಿಧಾನಸಭೆಯ ಏಕೈಕ ಕಾಂಗ್ರೆಸ್ ಶಾಸಕರಾಗಲಿದ್ದಾರೆ.