×
Ad

ಬಿಜೆಪಿಯಿಂದ ಸುಳ್ಳು ಆಶ್ವಾಸನೆ: ವಿನಯಕುಮಾರ್ ಸೊರಕೆ ಆರೋಪ

ಕಾಪುವಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

Update: 2023-03-04 23:26 IST

ಕಾಪು : ದಿನ ಬೆಳಗಾದರೆ ಬಿಜೆಪಿ ಸರ್ಕಾರದಿಂದ ಸುಳ್ಳು ಆಶ್ವಾಸನೆಗಳು ಅತಿಯಾದ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಯಾರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಇದು ಬಿಜೆಪಿ ಆಡಳಿತದಿಂದ ಎಲ್ಲಾ ಸ್ಥರದ ಜನರಿಗೆ ನೀಡಿರುವ ಕೊಡುಗೆ ಪರ್ಸಂಟೇಜ್ ವ್ಯವಹಾರ ಜನಪ್ರತಿನಿಧಿಗಳ ಸಂಬಂಧಿಕರೇ ಸಾರ್ವಜನಿಕವಾದ ಭ್ರಷ್ಟಾಚಾರದಲ್ಲಿ ತೊಡಗಿರುವುದು ದಿನಂಪ್ರತಿಯ ಸುದ್ದಿಯಾಗಿದೆ ಎಂದು ಮಾಜಿ ಶಾಸಕ ವಿನಯಕುಮಾರ್ ಸೊರಕೆ ಹೇಳಿದರು. 

ಅವರು ಶನಿವಾರ ಕಾಪು ರಾಜೀವ ಭವನದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‍ನ್ನು ಬೂತ್ ಮಟ್ಟದ ಕಾರ್ಯಕರ್ತರಿಗೆ ವಿತರಿಸಿ ಅವರು ಮಾತನಾಡಿದರು

ರಾಜ್ಯದಲ್ಲಿ 11 ಬಾರಿ ಬಜೆಟ್ ಮಂಡಿಸಿರುವ ಆರ್ಥಿಕ ತಜ್ಞ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಸಹಿ ಇರುವ ಗ್ಯಾರಂಟಿ ಕಾರ್ಡನ್ನು ಜನರಿಗೆ ನೀಡಬೇಕೆಂಬ ಉದ್ದೇಶದಿಂದ ಕಾಪು ಕ್ಷೇತ್ರದಾದ್ಯಂತ ಎಲ್ಲಾ ಬೂತ್ ಗಳಿಗೂ ಮನೆ ಮನೆಗೆ ತೆರಳಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಗ್ಯಾರೆಂಟಿ ಕಾರ್ಡ್‍ನಿಂದ ಪ್ರತಿಯೊಬ್ಬರ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಗೃಹಜೋತಿ ಪ್ರತಿ ಮನೆಯ ಕುಟುಂಬದ ಮಹಿಳೆಗೆ 2000ಹಾಗೂ ಅದಲ್ಲದೆ ಅನ್ನಭಾಗ್ಯ ಯೋಜನೆಯಿಂದ ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿಯೊಬ್ಬ ಕುಟುಂಬದ ಸದಸ್ಯರಿಗೆ ತಲಾ ಹತ್ತು ಕೆಜಿ ಅಕ್ಕಿ ನೀಡುವ ಅತ್ಯಂತ ಮಹತ್ವದ ಯೋಜನೆಗೆ ಚಾಲನೆ ನೀಡಲಾಗುವುದೆಂಬ ವಿಷಯವನ್ನು ಮುಂಚಿತವಾಗಿಯೇ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೊರಕೆ ತಿಳಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ ಸಹಿತ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು. 

Similar News