×
Ad

ಉತ್ತರಾಖಂಡ: 12 ಗಂಟೆಗಳಲ್ಲಿ ಮೂರು ಬಾರಿ ಲಘು ಭೂಕಂಪ

Update: 2023-03-06 07:38 IST

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿ ಭಾನುವಾರ 12 ಗಂಟೆಯ ಅವಧಿಯಲ್ಲಿ ಮೂರು ಲಘು ಭೂಕಂಪಗಳು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಮಧ್ಯರಾತ್ರಿಯ ಬಳಿಕ 12.45ಕ್ಕೆ ಮೊದಲ ಬಾರಿ 2.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರ ಬಿಂದು ಭಟ್ವಾರಿ ತಾಲೂಕಿನ ಸಿರೂರ್ ಅರಣ್ಯದಲ್ಲಿತ್ತು. ಎರಡನೇ ಬಾರಿಗೆ ಸ್ವಲ್ಪ ಹೊತ್ತಿನಲ್ಲೇ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ಮಾಪನ ಮಾಡಲು ಸಾಧ್ಯವಾಗದಷ್ಟು ಅಲ್ಪವಿತ್ತು. ಮುಂಜಾನೆ 10.10ಕ್ಕೆ 1.8 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಉತ್ತರಕಾಶಿಯ ಈಶಾನ್ಯಕ್ಕೆ ಇತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.

ಉತ್ತರಕಾಶಿ ಭಾರತದ ಭೂಕಂಪ ಮಾಪನ ನಕ್ಷೆಯಲ್ಲಿ ಗರಿಷ್ಠ ಅಪಾಯ ಸಾಧ್ಯತೆಯ ವಲಯದಲ್ಲಿ ಬರುತ್ತದೆ. ಟರ್ಕಿಯನ್ನು ಇತ್ತೀಚಗೆ ಧ್ವಂಸಗೊಳಿಸಿದಷ್ಟು ತೀವ್ರತೆಯ ಭೂಕಂಪವೊಂದು ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಈ ಭೂಕಂಪ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.

Similar News