ಹೈದರಾಬಾದ್: ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ನಟ ಅಮಿತಾಬ್ ಬಚ್ಚನ್ ಗೆ ಗಾಯ
Update: 2023-03-06 10:48 IST
ಹೊಸದಿಲ್ಲಿ: ಹೈದರಾಬಾದ್‌ನಲ್ಲಿ Project K ಚಿತ್ರೀಕರಣದ ವೇಳೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್(Amitabh Bachchan) ಅವರಿಗೆ ಗಾಯವಾಗಿದ್ದು 80 ವರ್ಷ ವಯಸ್ಸಿನ ಬಾಲಿವುಡ್ ಸ್ಟಾರ್ ಅಮಿತಾಬ್ ಅವರು ಬ್ಲಾಗ್ ಪೋಸ್ಟ್‌ನಲ್ಲಿ ತನ್ನ ಗಾಯದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಬಚ್ಚನ್ ಅವರು ಹೈದರಾಬಾದ್‌ನಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆದಿದ್ದಾರೆ.
ಸದ್ಯ ತಾನು ಮುಂಬೈನ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಓಡಾಡುವಾಗ ಹಾಗೂ ಉಸಿರಾಟದ ವೇಳೆ ನೋವು ಕಾಣಿಸಿಕೊಳ್ಳುತ್ತಿದೆ ಎಂದು ಅಮಿತಾಬ್ ಬಚ್ಚನ್ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ ಹಾಗೂ ಅವರು ಚೇತರಿಸಿಕೊಳ್ಳಲು ಕೆಲವು ವಾರಗಳು ಬೇಕಾಗಬಹುದು.
Project K ಚಿತ್ರದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಸಹ-ನಟರಾಗಿ ಕಾಣಿಸಿಕೊಂಡಿದ್ದಾರೆ.