ರೈಲಿನ ಕೊನೆಯ ಬೋಗಿಯ ಹಿಂದೆ 'X' ಗುರುತು ಏಕೆ ಹಾಕಿರುತ್ತಾರೆ?
Update: 2023-03-06 14:01 IST
ಹೊಸದಿಲ್ಲಿ: ರೈಲು ಬೋಗಿಗಳ ಮೇಲೆ ಹಲವಾರು ಬಗೆಯ ಗುರುತು, ಸಂಖ್ಯೆಗಳನ್ನು ನಮೂದಿಸಲಾಗಿರುತ್ತದೆ. ಈ ಎಲ್ಲಕ್ಕೂ ವಿಭಿನ್ನ ಅರ್ಥಗಳಿರುತ್ತವೆ. ಹಾಗೆಯೇ ರೈಲಿನ ಕೊನೆಯ ಬೋಗಿಯ ಮೇಲೆ ದಪ್ಪಕ್ಷರಗಳಲ್ಲಿ X ಎಂದೂ ನಮೂದಿಸಿರಲಾಗುತ್ತದೆ.
ಅದು ಏಕೆ ಎಂಬ ಗೊಂದಲ ಇನ್ನೂ ಹಲವರಲ್ಲಿದೆ. ಅದಕ್ಕೆ ಖುದ್ದು ರೈಲ್ವೆ ಇಲಾಖೆಯೇ ಮಾಹಿತಿ ನೀಡಿದೆ.
ರೈಲು ಹಳಿಯ ಮೇಲೆ ಸಾಗುವಾಗ ನಿಲ್ದಾಣಗಳ ಬಳಿಯ ಅಧಿಕಾರಿಗಳಿಗೆ ಕೊನೆಯ ಬೋಗಿ ಕೂಡಾ ಸಾಗಿ ಹೋಗಿದೆ ಎಂಬ ಸೂಚನೆಯನ್ನು ನೀಡಲು ಅದರ ಮೇಲೆ X ಗುರುತು ಹಾಕಲಾಗಿರುತ್ತದೆ ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
Did you Know?
— Ministry of Railways (@RailMinIndia) March 5, 2023
The letter ‘X’ on the last coach of the train denotes that the train has passed without any coaches being left behind. pic.twitter.com/oVwUqrVfhE