×
Ad

ಮೇಘಾಲಯ: ಕಾನ್ರಾಡ್ ಸಂಗ್ಮಾ ನೇತೃತ್ವದ NPPಗೆ ಮತ್ತೆರಡು ಪಕ್ಷಗಳ ಬೆಂಬಲ

Update: 2023-03-06 14:29 IST

ಶಿಲ್ಲಾಂಗ್: ಕಾನ್ರಾಡ್ ಕೆ. ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿಗೆ ಮತ್ತೆರಡು ಪ್ರಾದೇಶಿಕ ಪಕ್ಷಗಳಾದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ಬೆಂಬಲ ಘೋಷಿಸಿವೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ 11 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಎರಡು ಪಕ್ಷಗಳ ಬೆಂಬಲದಿಂದ 60 ಸದಸ್ಯ ಬಲದ ಮೇಘಾಲಯ (Meghalaya) ವಿಧಾನಸಭೆಯಲ್ಲಿ ಸಂಗ್ಮಾ ಪಕ್ಷವು 45 ಶಾಸಕರ ಬೆಂಬಲ ಪಡೆದಂತಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಕಾನ್ರಾಡ್ ಕೆ.ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿಯು 26 ಸ್ಥಾನ ಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಹೀಗಿದ್ದೂ, ಬಹುಮತದ ಸಂಖ್ಯೆಯಾದ 31 ಅನ್ನು ದಾಟುವಲ್ಲಿ ಅದು ವಿಫಲವಾಗಿತ್ತು.

ತಮ್ಕ ಪಕ್ಷಕ್ಕೆ ಬೆಂಬಲ ನೀಡಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್‌ಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿರುವ ಕಾನ್ರಾಡ್ ಕೆ. ಸಂಗ್ಮಾ, "ಸರ್ಕಾರ ರಚಿಸಲು ನ್ಯಾಷನಲ್ ಪೀಪಲ್ಸ್ ಪಾರ್ಟಿಯೊಂದಿಗೆ ಕೈಜೋಡಿಸಿದ್ದಕ್ಕೆ ಯುಡಿಪಿ ಹಾಗೂ ಪಿಡಿಎಫ್‌ಗಳಿಗೆ ಧನ್ಯವಾದ. ಪ್ರಾದೇಶಿಕವಾಗಿ ಬೆಳೆದಿರುವ ರಾಜಕೀಯ ಪಕ್ಷಗಳ ಬೆಂಬಲವು ಮೇಘಾಲಯ ಹಾಗೂ ಅದರ ಜನರಿಗೆ ಸೇವೆ ಸಲ್ಲಿಸಲು ನಮ್ಮನ್ನು ಮತ್ತಷ್ಟು ಮತ್ತಷ್ಟು ಬಲಿಷ್ಠವಾಗಿಸಿದೆ" ಎಂದು ಹೇಳಿದ್ದಾರೆ.

Similar News