ಅಂದರ್ ಬಾಹರ್: ಆರು ಮಂದಿ ಬಂಧನ

Update: 2023-03-06 15:06 GMT

ಮಣಿಪಾಲ, ಮಾ.6: ಅಲೆವೂರು ಪ್ರಾಥಮಿಕ ಶಾಲೆಯ ಮೈದಾನದ ಬಳಿ ಮಾ.5ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ.

ಧೀರಜ್(25), ಗಣೇಶ್(29), ವೀರಪ್ಪ(41), ಮಹಾಂತೇಶ್(27), ಮಲ್ಲಪ್ಪ(42), ರಮೇಶ್ ಬಾಬು(66) ಬಂಧಿತ ಆರೋಪಿಗಳು. ಇವರಿಂದ 2,430ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News