×
Ad

ಅಮೆರಿಕಾದಲ್ಲಿ ಸಣ್ಣ ವಿಮಾನ ಪತನ: ಭಾರತೀಯ ಮೂಲದ ಮಹಿಳೆ ಮೃತ್ಯು, ಮಗಳಿಗೆ ಗಂಭೀರ ಗಾಯ

Update: 2023-03-07 10:43 IST

ನ್ಯೂಯಾರ್ಕ್:  ನ್ಯೂಯಾರ್ಕ್ ಪ್ರದೇಶದಲ್ಲಿ ಸಂಭವಿಸಿದ ಸಣ್ಣ ವಿಮಾನ ಅಪಘಾತದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಭಾರತ ಮೂಲದ ಮಹಿಳೆಯ ಮಗಳು ಹಾಗೂ  ಪೈಲಟ್ ಬೋಧಕಿ ಅಪಘಾತದಲ್ಲಿ  ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ರೋಮಾ ಗುಪ್ತಾ( 63 ವರ್ಷ) ಹಾಗೂ ಅವರ ಮಗಳು ರೀವಾ ಗುಪ್ತಾ(33 ವರ್ಷ) ರವಿವಾರ ಸಣ್ಣ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಲಾಂಗ್ ಐಲ್ಯಾಂಡ್ ಮನೆಗಳ ಬಳಿ  ವಿಮಾನ ಅಪಘಾತಕ್ಕೀಡಾಗುವ ಮೊದಲು ಕಾಕ್‌ಪಿಟ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು  ಎಂದು ಎನ್‌ಬಿಸಿ ನ್ಯೂಯಾರ್ಕ್ ಟಿವಿ ಚಾನೆಲ್ ವರದಿ ಮಾಡಿದೆ.

ನಾಲ್ಕು ಆಸನಗಳ ಸಿಂಗಲ್-ಇಂಜಿನ್ ಪೈಪರ್ ಚೆರೋಕೀ ವಿಮಾನವು ಲಾಂಗ್ ಐಲ್ಯಾಂಡ್‌ನ ರಿಪಬ್ಲಿಕ್ ಏರ್‌ಪೋರ್ಟ್‌ಗೆ ಹಿಂತಿರುಗುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಾಗ ರೋಮಾ ಸಾವನ್ನಪ್ಪಿದರು.

ವರದಿಯ ಪ್ರಕಾರ ರೋಮಾ  ಅವರ ಮಗಳು ರೀವಾ ಹಾಗೂ  23 ವರ್ಷದ ಪೈಲಟ್ ಬೋಧಕಿ  ತೀವ್ರ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.

"ಇಬ್ಬರು ರೋಗಿಗಳು ಗಂಭೀರ ಗಾಯಗೊಂಡಿದ್ದು  ತೀವ್ರವಾದ ಸುಟ್ಟ ಗಾಯಕ್ಕೊಳಗಾಗಿದ್ದಾರೆ.  ನನಗೆ ತಿಳಿದಿರುವಂತೆ ಅವರನ್ನು ವಿಮಾನದಿಂದ ಹೊರತೆಗೆಯಲಾಗಿದೆ" ಎಂದು ಉತ್ತರ ಲಿಂಡೆನ್‌ಹರ್ಸ್ಟ್ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಕೆನ್ನಿ ಸ್ಟಾಲೋನ್ ಹೇಳಿದ್ದಾರೆ.

Similar News