ಹೋಳಿ ದಿನ ದೇಶದ ಒಳಿತಿಗಾಗಿ ದಿನಪೂರ್ತಿ ಧ್ಯಾನ, ಪ್ರಾರ್ಥನೆ ಆರಂಭಿಸಿದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್

"ಒಳ್ಳೆಯ ಕೆಲಸ ಮಾಡುವವರನ್ನು ಬಂಧಿಸಲಾಗುತ್ತಿದೆ , ದೇಶ ಲೂಟಿ ಮಾಡುವವರು ಪಾರಾಗುತ್ತಿದ್ದಾರೆ"

Update: 2023-03-08 07:41 GMT

ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ  ಕೇಜ್ರಿವಾಲ್ ಅವರು ದೇಶದ ಒಳಿತಿಗಾಗಿ ತಮ್ಮ ದಿನಪೂರ್ತಿ  ಧ್ಯಾನ, ಪ್ರಾರ್ಥನೆಯನ್ನು ಪ್ರಾರಂಭಿಸುವ ಮೊದಲು ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಹೋಳಿ ಹಬ್ಬದಂದು ದೇಶಕ್ಕಾಗಿ ಪ್ರಾರ್ಥಿಸುವುದಾಗಿ ಅರವಿಂದ  ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದು, ಒಳ್ಳೆಯ ಕೆಲಸ ಮಾಡುವವರನ್ನು ಬಂಧಿಸಲಾಗುತ್ತಿದೆ ಹಾಗೂ  ದೇಶವನ್ನು ಲೂಟಿ ಮಾಡುವವರು ಪಾರಾಗುತ್ತಿದ್ದಾರೆ ಎಂದು ಅವರು  ಹೇಳಿದ್ದಾರೆ.

ಮನೀಶ್ ಸಿಸೋಡಿಯಾ ಹಾಗೂ  ಸತ್ಯೇಂದ್ರ ಜೈನ್ ತಮ್ಮ ಕಠಿಣ ಪರಿಶ್ರಮದಿಂದ ಬಡವರಿಗೆ ಗುಣಮಟ್ಟದ ಶಿಕ್ಷಣ ಹಾಗೂ  ಆರೋಗ್ಯವನ್ನು ಖಾತ್ರಿಪಡಿಸುವ ಮೊದಲು ದಿಲ್ಲಿಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು 65 ವರ್ಷಗಳ ಕಾಲ ನಿರ್ಲಕ್ಷಿಸಲಾಯಿತು ಎಂದು ಅವರು ಹೇಳಿದರು.

ಆದರೆ ಪ್ರಧಾನಿ ನರೇಂದ್ರ ಮೋದಿ ಅವರು "ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುವವರನ್ನು (ಜೈನ್ ಮತ್ತು ಸಿಸೋಡಿಯಾ) ಜೈಲಿಗೆ ಹಾಕಿದ್ದಾರೆ, ಆದರೆ ದೇಶವನ್ನು ಲೂಟಿ ಮಾಡುವವರನ್ನು ಅಪ್ಪಿಕೊಳ್ಳುತ್ತಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

Similar News