ನಾನು ಹೇಳಿದ್ದರ ಬಗ್ಗೆ ನನಗೆ ನಾಚಿಕೆಯಿಲ್ಲ: ತಂದೆಯ ಲೈಂಗಿಕ ದೌರ್ಜನ್ಯದ ಕುರಿತು ಖುಷ್ಬೂ ಸುಂದರ್

Update: 2023-03-08 10:10 GMT

ಹೈದರಾಬಾದ್: ನಾನು ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಹಾಗೂ ಆ ಘಟನೆಯ ಬಗ್ಗೆ ಪ್ರಾಮಾಣಿಕವಾಗಿ ಹೇಳಿಕೆ ನೀಡಿರುವುದರಿಂದ ನನಗೆ ಯಾವುದೇ ನಾಚಿಕೆಯಿಲ್ಲ ಎಂದು ಬಿಜೆಪಿ (BJP) ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ (Khushbu Sundar) ಸ್ಪಷ್ಟಪಡಿಸಿದ್ದಾರೆ.

ತಾನು ಎಂಟು ವರ್ಷದವಳಿದ್ದಾಗ ತಂದೆಯಿಂದಲೇ ದೌರ್ಜನ್ಯಕ್ಕೊಳಗಾಗಿದ್ದೆ ಎಂಬ ಹೇಳಿಕೆ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಬಿಜೆಪಿ ನಾಯಕಿಯೂ ಆದ ಖುಷ್ಬೂ, "ನಾನು ಬೆಚ್ಚಿಬೀಳಿಸುವ ಹೇಳಿಕೆ ನೀಡಿದ್ದೆ. ನಾನದನ್ನು ಪ್ರಾಮಾಣಿಕವಾಗಿ ಹೇಳಿದ್ದೆ ಎಂಬುದು ನನ್ನ ಭಾವನೆಯಾಗಿದೆ. ಇದು ನನ್ನೊಂದಿಗೆ ನಡೆದಿರುವ ನೈಜ ಘಟನೆಯಾಗಿರುವುದರಿಂದ ಅಪರಾಧಿ ತಾನು ಮಾಡಿದ್ದಕ್ಕೆ ನಾಚಿಕೆ ಪಡಬೇಕೇ ಹೊರತು ನಾನಲ್ಲ" ಎಂದು ಹೇಳಿದ್ದಾರೆ.

ನನ್ನ ಹೇಳಿಕೆಯ ನಂತರ ಉಳಿದ ಮಹಿಳೆಯರು ತಮಗೇನಾಗಿತ್ತು ಎಂಬುದರ ಕುರಿತು ಮಾತಾಡಬೇಕು ಎಂದೂ ಅವರು ಕರೆ ನೀಡಿದ್ದಾರೆ.

"ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳುವಷ್ಟು ಬಲಿಷ್ಠವಾಗಿರಬೇಕು ಮತ್ತು ಏನೂ ನಿಮ್ಮನ್ನು ಅಧೀರಗೊಳಿಸದಂತೆ ಅಥವಾ ಇದೇ ಮಾರ್ಗದ ಅಂತ್ಯ ಭಾವಿಸದಂತೆ ಎಲ್ಲರಿಗೂ ನಾನು ಸಂದೇಶ ನೀಡಬೇಕಿತ್ತು. ನಾನೇ ಈ ವಿಷಯವನ್ನು ಹೇಳಲು ಇಷ್ಟು ವರ್ಷ ತೆಗೆದುಕೊಂಡಿರುವಾಗ, ಉಳಿದ ಮಹಿಳೆಯರೂ ಈ ಕುರಿತು ಮಾತಾಡಬೇಕು ಮತ್ತು ಇತರರಿಗೆ ಇದು ನನ್ನೊಂದಿಗೆ ಜರುಗಿತ್ತು ಮತ್ತು ಏನೇ ಆದರೂ ನನ್ನ ಪಯಣ ಮುಂದುವರಿಸುತ್ತೇನೆ ಎಂದು ಹೇಳಬೇಕು" ಎಂದು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯೆಯಾದ ಖುಷ್ಬೂ ಸುಂದರ್, ಇತ್ತೀಚೆಗಷ್ಟೇ ಇತರ ಇಬ್ಬರೊಂದಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನಾಮಕರಣಗೊಂಡಿದ್ದಾರೆ.

ಇದನ್ನೂ ಓದಿ: ನಟಿ ಸ್ವರಾ ಭಾಸ್ಕರ್-ಫಹದ್‌ ಅಹ್ಮದ್‌ ವಿವಾಹ ಆಮಂತ್ರಣದಲ್ಲಿ ಗಮನಸೆಳೆದ 'ಘೋಷಣೆಗಳು'

Similar News