×
Ad

ಲಂಡನ್‌ ಕಾರ್ಯಕ್ರಮದಲ್ಲಿ ಆರೆಸ್ಸೆಸ್‌ ವ್ಯಕ್ತಿಯ ಪುತ್ರಿಯ ಪ್ರಶ್ನೆಯನ್ನು ಶ್ಲಾಘಿಸಿದ ರಾಹುಲ್‌ ಗಾಂಧಿ

Update: 2023-03-08 18:02 IST

ಹೊಸದಿಲ್ಲಿ: ಲಂಡನ್‌ನ ಚಾಥಮ್‌ ಹೌಸ್‌ನಲ್ಲಿ ನಡೆದ ಸಂವಾದಾತ್ಮಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅಲ್ಲಿ ಆರೆಸ್ಸೆಸ್‌ (RSS) ಕಾರ್ಯಕರ್ತರೊಬ್ಬರ ಪುತ್ರಿ ತಮಗೆ ಕೇಳಿದ ಪ್ರಶ್ನೆಗೆ ಅವರನ್ನು ಶ್ಲಾಘಿಸಿದ್ದಾರೆ.

ಈ ಸಂವಾದಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಲಿನಿ ಮೆಹ್ರಾ ಅವರು ಮಾತನಾಡಿ "ನನ್ನ ದೇಶದ ಪರಿಸ್ಥಿತಿ ನೋಡಿ ಬೇಸರವಾಗುತ್ತಿದೆ. ನನ್ನ ತಂದೆ ಆರೆಸ್ಸೆಸ್‌ನವರಾಗಿದ್ದರು ಮತ್ತು ಅವರಿಗೆ ದೇಶದ ಬಗ್ಗೆ ಹೆಮ್ಮೆಯಿತ್ತು., ಆದರೆ ಈಗ ದೇಶ ಹಾಗಿಲ್ಲ ಎಂಬುದು ಅವರ ಭಾವನೆ. ದೇಶದ ಹೊರಗೆ ವಾಸಿಸುವ ನಮ್ಮಂತಹವರು ನಮ್ಮ ಪ್ರಜಾಪ್ರಭುತ್ವವನ್ನು ಹೇಗೆ ಬಲಪಡಿಸಬಹುದು?" ಎಂದು ಮಾಲಿನಿ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, ತಂದೆ ಆರೆಸ್ಸೆಸ್‌ನಲ್ಲಿರುವಾಗ ಈ ರೀತಿ ಈ ವಿಚಾರದ ಬಗ್ಗೆ ದನಿ ಎತ್ತಿ ಮಾತನಾಡುವುದು ನಿಜವಾಗಿಯೂ ಪ್ರಬಲತೆಯಾಗಿದೆ ಎಂದು ಹೇಳಿದರು.

ತಾವು ಈ ರೀತಿ ಹೇಳಿದರೆ ತಾವು ಪಕ್ಷಪಾತಿ ಧೋರಣೆ ಹೊಂದಿರುವ ಬಗ್ಗೆ ಆರೋಪಿಸಬಹುದು ಆದರೆ  ಭಾರತ ತನ್ನ ಮೂಲಭೂತ ಮೌಲ್ಯಗಳನ್ನು ಕಳೆದುಕೊಂಡಿದೆ ಮತ್ತು ಅದು ತನ್ನ ಮೌಲ್ಯಗಳಿಗೆ ಮರಳಬೇಕು ಎಂದು ಹೇಳಿ ಆಕೆ ದೊಡ್ಡ ಕೆಲಸ ಮಾಡಿದ್ದಾರೆ ಎಂದು ರಾಹುಲ್‌ ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ರಾಹುಲ್‌ ಅವರು ಆರೆಸ್ಸೆಸ್‌ ಅನ್ನು ಮೂಲಭೂತವಾದಿ ಮತ್ತು ಫ್ಯಾಸಿಸ್ಟ್‌ ಸಂಘಟನೆ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಆತ್ಮಹತ್ಯೆ ಅಲ್ಲದೆ ಬೇರೆ ಯಾವ ದಾರಿ ಉಳಿದಿದೆ?: ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರ ಪ್ರಶ್ನೆ

Similar News