ಪ್ಯಾರಚೂಟ್ ಸಾಹಸ ಮಾಡಲು ಹೋಗಿ ಎರಡು ತಾಸುಗಳ ಕಾಲ ಕಂಬದಲ್ಲೇ ಸಿಲುಕಿದ ಪ್ರವಾಸಿಗರು.!
ತಿರುವನಂತಪುರ: ಕೇರಳದ ಕಡಲತೀರದಲ್ಲಿ ಹೊರಾಂಗಣ ಸಾಹಸದಲ್ಲಿ ತೊಡಗಲು ಯೋಜಿಸಿದ್ದ ಇಬ್ಬರು ಪ್ರವಾಸಿಗರು ತಮ್ಮ ಪ್ಯಾರಾಚೂಟ್‌ಗಳು ಸುರಕ್ಷಿತ ಸ್ಥಳದಲ್ಲಿ ಇಳಿಯದೆ ಪೇಚಿಗೀಡಾದ ಘಟನೆ ನಡೆದಿದೆ.
ತಿರುವನಂತಪುರಂನ ಗ್ರಾಮಾಂತರ ಪ್ರದೇಶದ ವರ್ಕಳದ ಪಾಪನಾಶಂ ಬೀಚ್‌ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಪ್ಯಾರಾಚೂಟ್ ಲೈಟ್ ಕಂಬಕ್ಕೆ ಸಿಲುಕಿದ್ದರಿಂದ ಸುಮಾರು ಎರಡು ತಾಸುಗಳ ಕಾಲ ಕಂಬದಲ್ಲೇ ಬಾಕಿಯಾಗಿರುವುದಾಗಿ ವರದಿಯಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೈ-ವೋಲ್ಟೇಜ್ ದೀಪಗಳನ್ನು ಅಳವಡಿಸಲಾದ ಕಂಬಕೆ ಸುಮಾರು 50 ಅಡಿ ಎತ್ತರದಲ್ಲಿ ಪ್ಯಾರಾಚೂಟ್ ಸಿಕ್ಕಿದೆ. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ಮಾಡಿ ಇಬ್ಬರನ್ನು ಇಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
#WATCH | Kerala: A man and woman met with an accident while paragliding when they got stuck on a high mast light pole in Varkala in rural Thiruvananthapuram. Both the tourists were rescued & were shifted to the hospital. pic.twitter.com/nQVH5yZuMz
— ANI (@ANI) March 7, 2023