ನಾಲ್ಕನೇ ಟೆಸ್ಟ್: ರಥ ಏರಿ ಕ್ರೀಡಾಂಗಣಕ್ಕೆ ಸುತ್ತು ಬಂದ ಭಾರತದ ಪ್ರಧಾನಿ ಮೋದಿ, ಆಸ್ಟ್ರೇಲಿಯದ ಪ್ರಧಾನಿ ಅಲ್ಬೇನಿಸ್

Update: 2023-03-09 05:31 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ  ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬೇನಿಸ್ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯ ನಡುವಿನ 4ನೇ ಟೆಸ್ಟ್ ಪಂದ್ಯವನ್ನುಒಟ್ಟಿಗೆ ನೋಡಲು ಆಗಮಿಸಿದಾಗ  ಇಬ್ಬರನ್ನು ಜೋರಾದ ಹರ್ಷೋದ್ಗಾರ ಮತ್ತು ಚಪ್ಪಾಳೆಯಿಂದ ಸ್ವಾಗತಿಸಲಾಯಿತು. 

 ಇಬ್ಬರು ಪ್ರಧಾನಿಗಳು ಭಾರತ ಹಾಗೂ  ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲು ಗಾಲ್ಫ್ ಕಾರ್ಟ್‌ ಮಾದರಿಯಲ್ಲಿ ನಿರ್ಮಿಸಲಾಗಿರುವ "ರಥ" ದಲ್ಲಿ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ  ಒಂದು ಸುತ್ತು ಬಂದರು. ನೆರೆದಿದ್ದ  ಪ್ರೇಕ್ಷಕರತ್ತ ಕೈಬೀಸಿದರು.

ಪಿಎಂ ಮೋದಿ ಹಾಗೂ  ಅಲ್ಬೇನಿಸ್ ಅವರು ತಮ್ಮ ತಂಡದ ನಾಯಕರಾದ ರೋಹಿತ್ ಶರ್ಮಾ ಹಾಗೂ ಸ್ಟೀವ್ ಸ್ಮಿತ್ ಅವರಿಗೆ ಟೆಸ್ಟ್ ಕ್ಯಾಪ್ ಗಳನ್ನು ಹಸ್ತಾಂತರಿಸಿದರು ಹಾಗೂ  ತಂಡಗಳೊಂದಿಗೆ ಕೈಕುಲುಕಿದರು.

ಇಬ್ಬರು ನಾಯಕರು ಕ್ರಿಕೆಟ್ ಮೂಲಕ 75 ವರ್ಷಗಳ ಸ್ನೇಹವನ್ನು ಪ್ರತಿನಿಧಿಸುವ ಚೌಕಟ್ಟಿನ ಕಲಾಕೃತಿಗಳನ್ನು ಕೂಡ  ಪ್ರಸ್ತುತಪಡಿಸಿದ್ದಾರೆ.

ಭಾರತದ  ಭೇಟಿಯ ಭಾಗವಾಗಿ ಆಸ್ಟ್ರೇಲಿಯದ ಪ್ರಧಾನಿ ಬುಧವಾರ ಅಹಮದಾಬಾದ್‌ಗೆ ಆಗಮಿಸಿದರು.

"ಭಾರತದ ಅಹಮದಾಬಾದ್‌ಗೆ ನಂಬಲಾಗದ ಸ್ವಾಗತ ಲಭಿಸಿದೆ. ಆಸ್ಟ್ರೇಲಿಯಾ-ಭಾರತ ಸಂಬಂಧಗಳಿಗೆ ಒಂದು ಪ್ರಮುಖ ಪ್ರವಾಸದ ಪ್ರಾರಂಭ ಇದಾಗಿದೆ" ಎಂದು ಆಸ್ಟ್ರೇಲಿಯಾದ ಪ್ರಧಾನಿ ಅವರು ಆಗಮಿಸಿದ ಸ್ವಲ್ಪ ಸಮಯದ ನಂತರ ಟ್ವೀಟ್ ಮಾಡಿದ್ದಾರೆ.

Similar News