×
Ad

ನಾಗಾಲ್ಯಾಂಡ್ : ಎನ್‌ಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರಕ್ಕೆ ಬೆಂಬಲ ನೀಡಿದ್ದ ರಾಜ್ಯ ಘಟಕವನ್ನು ವಿಸರ್ಜಿಸಿದ ಜೆಡಿಯು

Update: 2023-03-09 13:39 IST

ಹೊಸದಿಲ್ಲಿ: ಪಕ್ಷದ ಕೇಂದ್ರ ನಾಯಕತ್ವವನ್ನು ಸಂಪರ್ಕಿಸದೆ ಪಕ್ಷದ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿ ನೀಫಿಯು ರಿಯೊಗೆ "ಬೆಂಬಲ ಪತ್ರವನ್ನು ನೀಡಿದ್ದಾರೆ" ಎಂಬ ವಿಚಾರ ತಿಳಿದ ನಂತರ ತನ್ನ ನಾಗಾಲ್ಯಾಂಡ್ ರಾಜ್ಯ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ ಎಂದು ಸಂಯುಕ್ತ ಜನತಾ ದಳ  (ಜೆಡಿಯು) ಬುಧವಾರ ಹೇಳಿದೆ.

ನಮ್ಮ ಪಕ್ಷದ ನಾಗಾಲ್ಯಾಂಡ್ ರಾಜ್ಯಾಧ್ಯಕ್ಷರು ಕೇಂದ್ರ ನಾಯಕತ್ವವನ್ನು ಸಂಪರ್ಕಿಸದೆ ನಾಗಾಲ್ಯಾಂಡ್ ಮುಖ್ಯಮಂತ್ರಿಗೆ ಬೆಂಬಲ ಪತ್ರವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದು ಅಶಿಸ್ತಿನ ಮತ್ತು ನಿರಂಕುಶ ಕ್ರಮವಾಗಿದೆ. ಆದ್ದರಿಂದ, ಪಕ್ಷವು ನಾಗಾಲ್ಯಾಂಡ್ ರಾಜ್ಯ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಿದೆ" ಎಂದು ಪಕ್ಷ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವರದಿಗಳ ಪ್ರಕಾರ, ನಾಗಾಲ್ಯಾಂಡ್ ಜೆಡಿಯು ಅಧ್ಯಕ್ಷ ಸೆಂಚುಮೊ ಲೋಥಾ ಹಾಗೂ ಪಕ್ಷದ ಏಕೈಕ ಶಾಸಕ ಜೆವೆಂಗಾ ಸೆಬ್ ಬುಧವಾರ ಮುಖ್ಯಮಂತ್ರಿ ನೀಫಿಯು ರಿಯೊ ಅವರನ್ನು ಭೇಟಿಯಾದರು. ಎನ್‌ಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರಕ್ಕೆ ತಮ್ಮ  ಬೆಂಬಲ ಪತ್ರವನ್ನು ಹಸ್ತಾಂತರಿಸಿದರು.

ಈ ಬೆಳವಣಿಗೆಯ ಬಗ್ಗೆ ಮಾಹಿತಿ  ಪಡೆದ ನಂತರ ಪಕ್ಷದ ಉನ್ನತ ನಾಯಕತ್ವವು ಕ್ರಮ ಕೈಗೊಂಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ  ರಾಜ್ಯ ಘಟಕವನ್ನು ವಿಸರ್ಜಿಸಿತು.

Similar News