ಬಿಲ್ಕಿಸ್‌ ಬಾನೋ ಹುಟ್ಟೂರಿನಲ್ಲಿ ಅಪಘಾತದ ನಂತರ ಕೋಮು ಉದ್ವಿಗ್ನತೆ

Update: 2023-03-09 10:34 GMT

 ಗೋಧ್ರಾ: ಗುಜರಾತ್‌ನಲ್ಲಿ 2002 ಗಲಭೆಗಳ ಸಂದರ್ಭ ಬಿಲ್ಕಿಸ್‌ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದ ರಾಜ್ಯದ ದಹೋದ್‌ ಜಿಲ್ಲೆಯ ರಂಧಿಕ್ಪುರ್‌ ಸುದ್ದಿಯಾಗಿದ್ದರೆ ಈಗ ಈ ಪಟ್ಟಣದಲ್ಲಿ ನಡೆದ ಅಪಘಾತವೊಂದು ಅಲ್ಲಿ ಉದ್ವಿಗ್ನತೆಯ ವಾತಾವರಣ ನೆಲೆಯೂರುವಂತೆ ಮಾಡಿದೆ.

ಮಾರ್ಚ್‌ 6 ರ ಸಂಜೆ ಇಲ್ಲಿ ನಡೆದ ಆಟೋರಿಕ್ಷಾ ಅಪಘಾತವೊಂದು ಇಲ್ಲಿನ ಶಾಂತ ವಾತಾವರಣವನ್ನು ಕದಡಿಸಿದೆ. ಆಟೋರಿಕ್ಷಾ ಚಾಲಕ ಮುಸ್ಲಿಂ ವ್ಯಕ್ತಿಯಾಗಿದ್ದರೆ, ಘಟನೆಯಲ್ಲಿ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಾದ ಹಿಂದು ಧರ್ಮದವನಾಗಿರುವುದೇ ಉದ್ವಿಗ್ನತೆಗೆ ಕಾರಣವಾಗಿದೆ.

ಮೃತನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಕ್ರೋಶಿತರಾಗಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಆದರೆ ತಕ್ಷಣ ಸ್ಥಳೀಯ ಮುಸ್ಲಿಮರೆಲ್ಲಾ ತಮ್ಮ ಮನೆಗಳಿಂದ ಪಲಾಯನಗೈದು ನೆರೆಯ ದೇವಗತ ಬರಿಯ ಗ್ರಾಮದ ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದರಿಂದ ಹಾಗೂ ಸ್ಥಳೀಯ ಮಸೀದಿಗೂ ಬೀಗ ಜಡಿದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯ ಗ್ರಾಮದಲ್ಲಿ ಓರ್ವ ಮುಸ್ಲಿಂ ಮಹಿಳೆ ಮತ್ತಾಕೆಯ ಮಗ ಮಾತ್ರ ವಾಸವಾಗಿದ್ದಾರೆ. ಮಹಿಳೆ ಇತ್ತೀಚೆಗಷ್ಟೇ ತನ್ನ ಪತಿಯನ್ನು ಕಳೆದುಕೊಂಡಿರುವುದರಿಂದ ಹಾಗೂ 40 ದಿನ ಆಕೆ ವಿಧಿವಿಧಾನಗಳನ್ನು ನೆರವೇರಿಸಬೇಕಿರುವುದರಿಂದ ತನ್ನ ಮನೆಯನ್ನು ತೊರೆದಿರಲಿಲ್ಲ.

ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Similar News