×
Ad

ತೊಕ್ಕೊಟ್ಟು: ರೈಲು ಢಿಕ್ಕಿ ಹೊಡೆದು ಹಿರಿಯ ಸಿವಿಲ್ ಗುತ್ತಿಗೆದಾರ ಮೃತ್ಯು

Update: 2023-03-09 19:52 IST

ಉಳ್ಳಾಲ: ರೈಲು ಢಿಕ್ಕಿ ಹೊಡೆದ ಪರಿಣಾಮ ಹಿರಿಯ ಸಿವಿಲ್ ಗುತ್ತಿಗೆದಾರರೋರ್ವರು ಸಾವನ್ನಪ್ಪಿದ ಘಟನೆ ತೊಕ್ಕೊಟ್ಟು ಕಾಪಿಕಾಡಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಉಳ್ಳಾಲ ಬೈಲು ಗೇರು ಕೃಷಿ ಸಂಶೋಧನಾ ಕೇಂದ್ರದ ಬಳಿಯ ನಿವಾಸಿ ಜನಾರ್ದನ ಆಚಾರಿ(78) ಮೃತರು.

ಅವರು ಕಳೆದ ಕೆಲ ವರ್ಷಗಳಿಂದ ನರ ರೋಗದಿಂದ ಬಳಲುತ್ತಿದ್ದರು. ಗುರುವಾರ ಬೆಳಗ್ಗೆ ಮನೆಯಿಂದ ಹೊರಟವರು ಸಮೀಪದ ಕಾಪಿಕಾಡಿನ ರೈಲ್ವೇ ಹಳಿಯಲ್ಲಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ  ಪತ್ತೆ ಆಗಿದ್ದಾರೆ.

ಮೃತದೇಹವನ್ನ ರೈಲ್ವೇ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Similar News