×
Ad

ಉಡುಪಿ: ರೈಲಿನಲ್ಲಿ ಕೇರಳದ ಪ್ರಯಾಣಿಕ ಮೃತ್ಯು

Update: 2023-03-09 21:28 IST

ಉಡುಪಿ, ಮಾ.9: ಕೇರಳದ ಮಲ್ಲಪುರಮ್‌ನ ಕುರುವ ಗ್ರಾಮದ ಅಬ್ದುಲ್ ಅಝೀಝ್ (74) ಎಂಬವರು ಕೇರಳದಿಂದ ಕಾಶ್ಮೀರದ ಜೈಚೋಲಿಗೆ ಕೆಲಸದ ಮೇಲೆ 12483 ನಂ. ರೈಲಿನಲ್ಲಿ ಪ್ರಯಾಣಿಸುತಿದ್ದು, ಈ ರೈಲು ಬುಧವಾರ ರಾತ್ರಿ 10:05ರ ಸುಮಾರಿಗೆ ಉಡುಪಿ ತಲುಪಿದಾಗ ಅವರು ಕೂತಿದ್ದ ಸೀಟಿನಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.

ಅಝೀಝ್ ಅವರು ತನ್ನ ಸೀಟಿನಲ್ಲೇ ಅಸ್ವಸ್ಥಗೊಂಡು ಬಿದ್ದಿರುವುದನ್ನು ಗಮನಿಸಿದ ಸಹ ಪ್ರಯಾಣಿಕರು ರೈಲ್ವೆ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ರೈಲ್ವೆ ಇಲಾಖೆ ವೈದ್ಯರು ಬಂದು ಪರಿಶೀಲಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News