×
Ad

ಫ್ರೀಡಂ ಹೌಸ್‌ ವರದಿ: ಸತತ ಮೂರನೇ ವರ್ಷ ಭಾರತಕ್ಕೆ "ಭಾಗಶಃ ಸ್ವತಂತ್ರ" ಸ್ಥಾನಮಾನ

Update: 2023-03-11 18:07 IST

ಹೊಸದಿಲ್ಲಿ: ವಾಷಿಂಗ್ಟನ್‌ ಮೂಲದ ಪ್ರಜಾಪ್ರಭುತ್ವ-ಪರ ಸಂಸ್ಥೆ ಫ್ರೀಡಂ ಹೌಸ್‌ (Freedom House report) ಇದರ ವಾರ್ಷಿಕ ವರದಿಯಲ್ಲಿ ಭಾರತ ಸತತ ಮೂರನೇ ವರ್ಷ ತನ್ನ "ಭಾಗಶಃ ಸ್ವತಂತ್ರ ದೇಶ" ಸ್ಥಾನಮಾನವನ್ನು ಉಳಿಸಿಕೊಂಡಿದೆ.

ರಾಜಕೀಯ ಹಕ್ಕುಗಳು, ನಾಗರಿಕ ಸ್ವಾತಂತ್ರ್ಯಗಳು, ಚುನಾವಣಾ ಪ್ರಕ್ರಿಯೆ, ಅಭಿವ್ಯಕ್ತಿ ಸ್ವಾತಂತ್ರ್ಯ, ವೈಯಕ್ತಿಕ ಹಕ್ಕುಗಳು, ಸರಕಾರದ ಕಾರ್ಯನಿರ್ವಹಣೆ ಮುಂತಾದ ಮಾನದಂಡಗಳ ಆಧಾರದಲ್ಲಿ ಫ್ರೀಡಂ ಹೌಸ್‌ನ ಅಧ್ಯಯನವು 195 ದೇಶಗಳನ್ನು ಅನುಕ್ರಮವಾಗಿ ಪಟ್ಟಿ ಮಾಡಿತ್ತು. ಇದರ ಆಧಾರದಲ್ಲಿ ಒಂದು ದೇಶವನ್ನು ಸ್ವತಂತ್ರ, ಭಾಗಶಃ ಸ್ವತಂತ್ರ ಅಥವಾ ಸ್ವತಂತ್ರವಲ್ಲ ಎಂದು ರ್ಯಾಂಕಿಂಗ್‌ ನೀಡಲಾಗುತ್ತದೆ.

ಫ್ರೀಡಂ ಹೌಸ್‌ನ 2023 ವರದಿಯಲ್ಲಿ ಕಳೆದ ವರ್ಷದಂತೆಯೇ ಈ ವರ್ಷವೂ ಭಾರತ 100 ರಲ್ಲಿ 66ನೇ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತಾರತಮ್ಯಕಾರಿ ನೀತಿಗಳು ಹಾಗೂ ಮುಸ್ಲಿಂ ಜನಸಂಖ್ಯೆಯ ಮೇಲಿನ ದೌರ್ಜನ್ಯವೇ ಭಾರತವು "ಭಾಗಶಃ ಸ್ವತಂತ್ರ" ಸ್ಥಾನಮಾನ ಪಡೆಯಲು ಕಾರಣ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಹೋಳಿ ಹಬ್ಬದಂದು ಕಿರುಕುಳ: ಭಾರತ ತೊರೆದ ಜಪಾನ್ ಯುವತಿ

Similar News