×
Ad

ವಂದೇ ಭಾರತ್ ರೈಲಿಗೆ ಮತ್ತೆ ಕಲ್ಲೆಸೆತ

Update: 2023-03-12 08:59 IST

ಕೊಲ್ಕತ್ತಾ: ಹೌರಾ- ನ್ಯೂ ಜಲಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೆಸೆದ ಮತ್ತೊಂದು ಪ್ರಕರಣ ದಾಖಲಾದ್ದು, ಇದು ಈ ರೈಲಿಗೆ ಕಳೆದ ಒಂದು ತಿಂಗಳಲ್ಲಿ ಕಲ್ಲೆಸೆದ ಐದನೇ ಪ್ರಕರಣವಾಗಿದೆ.

ಮುರ್ಶಿದಾಬಾದ್ ಜಿಲ್ಲೆಯ ಫರಕ್ಕಾದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಹೈಸ್ಪೀಡ್ ರೈಲಿನ ಬೋಗಿಯ ಗಾಜು ಒಡೆದಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

"ಇದು ತೀರಾ ದುರದೃಷ್ಟಕರ ಘಟನೆ. ಈ ಬಗ್ಗೆ ತನಿಖೆ ನಡೆಸಲಾಗುವುದು" ಎಂದು ಪೂರ್ವ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಕೌಶಿಕ್ ಮಿತ್ರಾ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಹೊಸದಾಗಿ ಆರಂಭವಾದ ರೈಲಿಗೆ ಜನವರಿಂದಲೇ ಕಲ್ಲೆಸೆಯುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹೈಸ್ಪೀಡ್ ರೈಲು ಕಿಡಿಗೇಡಿಗಳ ದಾಳಿಗೆ ಒಳಗಾಗತ್ತಿರುವುದು ಇದು ಐದನೇ ಬಾರಿ. ಪಶ್ಚಿಮ ಬಂಗಾಳದಲ್ಲೇ ಮೂರನೇ ಬಾರಿಗೆ ಕಲ್ಲೆಸೆತ ಪ್ರಕರಣ ವರದಿಯಾಗಿದೆ. ಕಾರ್ಯಾಚರಣೆ ಆರಂಭಿಸಿದ ಎರಡನೇ ದಿನವೇ ಪಶ್ಚಿಮ ಬಂಗಾಳದಲ್ಲಿ ರೈಲಿಗೆ ಕಲ್ಲು ಎಸೆಯಲಾಗಿತ್ತು. ಮಾಲ್ಡಾದಲ್ಲಿ ಮೊದ ದಿನ ಹಾಗೂ ಕಿಶನ್‌ಗಂಜ್‌ನಲ್ಲಿ ಎರಡನೇ ದಿನ ಕಲ್ಲೆಸೆಯಲಾಗಿತ್ತು.

Similar News