×
Ad

ಸಮಾರಂಭದಲ್ಲಿ ತನಗಿಂತ ಮೊದಲು ಭಾಷಣ ಮಾಡದಂತೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ತಡೆದ ಜ್ಯೋತಿರಾದಿತ್ಯ ಸಿಂಧಿಯಾ

ಇದು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಮಾಡಿರುವ ಸಾರ್ವಜನಿಕ ಅವಮಾನ ಎಂದ ಕಾಂಗ್ರೆಸ್

Update: 2023-03-12 12:03 IST

ಭೋಪಾಲ್: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia)  ಅವರು ತನಗಿಂತ ಮೊದಲು ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ವಿ.ಡಿ. ಶರ್ಮಾ ಅವರು  ಭಾಷಣ ಮಾಡದಂತೆ ತಡೆದಿರುವ ಘಟನೆ ನಡೆದಿದೆ.

 ಮಾಧವ್ ರಾಷ್ಟ್ರೀಯ ಉದ್ಯಾನವನಕ್ಕೆ ಹುಲಿಗಳ ಸ್ಥಳಾಂತರದ ಕಾರ್ಯಕ್ರಮ ಶಿವಪುರಿ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿಈ ಘಟನೆ ನಡೆದಿದೆ.  

 ಶರ್ಮಾ ಭಾಷಣ ಮಾಡಲು ಹೊರಟಾಗ ಅವರ ಹಿಂದೆಯೇ ಹೋದ ಸಿಂಧಿಯಾ, ಶರ್ಮಾ ಅವರಿಗೆ ಭಾಷಣಕ್ಕೆ ಅವಕಾಶ ನೀಡದೇ ತಾನೇ  ಜನಸಮೂಹವನ್ನು ಉದ್ದೇಶಿಸಿ ಮಾತನಾಡಲು ಆರಂಭಿಸಿದರು. ಆಗ ಶರ್ಮಾ ತಮ್ಮ ಸ್ಥಾನಕ್ಕೆ ಮರಳಬೇಕಾಯಿತು.

 ಈ ಘಟನೆಯಿಂದ ವಿಚಲಿತವಾಗಿರುವ ಬಿಜೆಪಿ, ಶಿಷ್ಟಾಚಾರವನ್ನು ಅನುಸರಿಸಲು ಹಾಗೂ  ಶರ್ಮಾ ಅವರನ್ನು ಗೌರವಿಸಲು ಸಿಂಧಿಯಾ ಹಾಗೆ ಮಾಡಿದ್ದಾರೆ ಎಂದು  ವಿವರಿಸಲು ಪ್ರಯತ್ನಿಸಿದೆ.

ಇದು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಮಾಡಿರುವ ಸಾರ್ವಜನಿಕ ಅವಮಾನ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಚುನಾವಣೆಗೆ ಎಂಟು ತಿಂಗಳ ಮೊದಲು ಬಿಜೆಪಿಯಲ್ಲಿ  ಬಿರುಕು ಕಾಣಿಸಿಕೊಂಡಿರುವ ಸಂಕೇತವಾಗಿ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Similar News