×
Ad

ವಿಮಾನ ನಿಲ್ದಾಣದಲ್ಲಿ ಪ್ರತಿಭಟನಾನಿರತ ಪ್ರಯಾಣಿಕನ ಮೇಲೆ ಹಲ್ಲೆ: ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ವಿರುದ್ಧ ಪ್ರಕರಣ

Update: 2023-03-12 12:18 IST

ಚೆನ್ನೈ: ಮಧುರೈ ವಿಮಾನ ನಿಲ್ದಾಣದಲ್ಲಿ ಪ್ರತಿಭಟನಾ ನಿರತ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಇ. ಪಳನಿಸ್ವಾಮಿ (E Palaniswami ) ಹಾಗೂ  ಎಐಎಡಿಎಂಕೆ ಶಾಸಕ ಪಿ.ಆರ್. ಸೆಂಥಿಲ್ನಾಥನ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

ಪ್ರಯಾಣಿಕ ಫೇಸ್‌ಬುಕ್ ಲೈವ್ ಸ್ಟ್ರೀಮ್ ಅನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆಪ್ತರಾದ ವಿಕೆ ಶಶಿಕಲಾ ಅವರಿಗೆ ಇಪಿಎಸ್ ಅವರು "ದ್ರೋಹ" ಮಾಡಿದ್ದಾರೆ ಎಂದು ಆರೋಪಿಸುತ್ತಿರುವುದು ಕೇಳಿಬಂದಿದೆ.

ಶಿವಗಂಗಾ ಜಿಲ್ಲೆಯಲ್ಲಿ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಇಪಿಎಸ್ ಚೆನ್ನೈನಿಂದ ಮಧುರೈಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಇಪಿಎಸ್ ವಿಮಾನ ನಿಲ್ದಾಣದಲ್ಲಿ ಶಟಲ್ ಬಸ್‌ನಲ್ಲಿ ಹತ್ತಿದಾಗ, ಒಬ್ಬ ವ್ಯಕ್ತಿ ಅವರನ್ನು ಹಾಗೂ  ಅವರ ಸುತ್ತಲಿನ ಭದ್ರತಾ ಸಿಬ್ಬಂದಿಯನ್ನು ರೆಕಾರ್ಡ್ ಮಾಡಲು ಆರಂಭಿಸಿದರು. ವನ್ನಿಯಾರ್ ಸಮುದಾಯಕ್ಕೆ ಶೇ.10.5ರಷ್ಟು ಮೀಸಲಾತಿ ನೀಡುವ ಮೂಲಕ ಇಪಿಎಸ್ ಅವರು ಶಶಿಕಲಾ ಹಾಗೂ  ದಕ್ಷಿಣ ತಮಿಳುನಾಡಿನ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಆತ ಆರೋಪಿಸಿದ್ದ.

Similar News