ಕಾಸರಗೋಡು: ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ

Update: 2023-03-12 07:12 GMT

ಕಾಸರಗೋಡು, ಮಾ.12: ಚಲಿಸುತ್ತಿದ್ದ ಕಾರೊಂದು ಬೆಂಕಿಗಾಹುತಿಯಾದ ಘಟನೆ ವೆಳ್ಳರಿಕುಂಡು ಸಮೀಪದ ಮಾಲೋ ಎಂಬಲ್ಲಿ ನಡೆದಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ವಿವಾಹ ನಿಶ್ಚಯಕ್ಕೆ ತೆರಳುತ್ತಿದ್ದ ಕುಟುಂಬವೊಂದು ಸಂಚರಿಸುತ್ತಿದ್ದ ಕಾರು ಮಾಲೋ ಎಂಬಲ್ಲಿಗೆ ತಲಪಿದಾಗ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರಲ್ಲಿದ್ದವರು ಹೊರಬಂದಿದ್ದು, ಇದರಿಂದ ಅಪಾಯ ತಪ್ಪಿದೆ. ಕಾರು ಸಂಪೂರ್ಣ ಅಗ್ನಿ ಗಾಹುತಿಯಾಗಿದೆ.

Similar News