ಮಹಿಳೆ ಆತ್ಮಹತ್ಯೆ

Update: 2023-03-12 15:16 GMT

ಕಾರ್ಕಳ, ಮಾ.12: ಮದ್ಯ ಸೇವಿಸುವ ಚಟ ಹೊಂದಿದ್ದ ಜೋಡುರಸ್ತೆಯ ಸಂದೀಪ್ ರಾವ್ ಎಂಬವರ ಪತ್ನಿ ಪಲ್ಲವಿ (32) ಎಂಬವರು ತಂದೆ ತಾಯಿ ಇಲ್ಲದ ಚಿಂತೆ ಹಾಗೂ ಅಣ್ಣಂದಿರಿಗೆ ಮದುವೆಯಾಗಿಲ್ಲ ಎಂದು ಮಾನಸಿಕವಾಗಿ ನೊಂದು ಮಾ.10ರಂದು ರಾತ್ರಿ ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News