ಕಾರ್ಕಳ: ಮನೆಗೆ ನುಗ್ಗಿ ನಗ ನಗದು ಕಳವು

Update: 2023-03-12 15:20 GMT

ಕಾರ್ಕಳ, ಮಾ.12: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಮಾ.11ರಂದು ರಾತ್ರಿ ನಿಟ್ಟೆ ಗ್ರಾಮದ ಕಲಂಬಾಡಿ ಪದವು ಎಂಬಲ್ಲಿ ನಡೆದಿದೆ.

ಸಂತೋಷ ಭಂಡಾರಿ ಎಂಬವರ ಮನೆಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು, ಮರದ ಕಪಾಟಿನಲ್ಲಿಟ್ಟಿದ್ದ ಸುಮಾರು 95,000 ರೂ. ಮೌಲ್ಯದ 6 ಪವನ್ ತೂಕದ ಚಿನ್ನಾಭರಣಗಳು ಹಾಗೂ 50,000ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News