ಡ್ಯಾಂಗೆ ಬಿದ್ದು ಮಹಿಳೆ ಮೃತ್ಯು

Update: 2023-03-12 15:22 GMT

ಕಾರ್ಕಳ : ಪಳ್ಳಿ ಗ್ರಾಮದ ಕಲ್ಲಪ್ಪು ಸೇತುವೆ ಬಳಿಯ ನೀರಿನ ಡ್ಯಾಂಗೆ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಕೌಡೂರು ಗ್ರಾಮದ ಗುಂಡ್ಯಡ್ಕ ಎಲಿಯಾಳ ನಿವಾಸಿ ಬಡ್ಡು ಹಾಂಡ್ತಿ (73) ಎಂದು ಗುರುತಿಸಲಾಗಿದೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಮಾ.10ರಂದು ರಾತ್ರಿ ಮನೆಯಿಂದ ಹೋದವರು ನೀರಿನ ಡ್ಯಾಂಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಇವರ ಮೃತದೇಹ ಮಾ.12ರಂದು ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News