ರೈಲಿನಡಿಗೆ ಬಿದ್ದು ಅಪರಿಚಿತ ಆತ್ಮಹತ್ಯೆ

Update: 2023-03-12 15:23 GMT

ಬೈಂದೂರು : ರೈಲಿನಡಿಗೆ ಬಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ಗ್ರಾಮದ ವಿದ್ಯಾನಗರ ಬಳಿ ಮಾ.11ರಂದು ರಾತ್ರಿ ವೇಳೆ ನಡೆದಿದೆ.

ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲ್ವೆ ಹಳಿಯ ಮೇಲೆ ಮಲಗಿಕೊಂಡಿದ್ದು  ಆತನ ಮೇಲೆ ರೈಲು ಚಲಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News