×
Ad

ಮಗನನ್ನೇ ದರೋಡೆ ಮಾಡಲು ಯತ್ನಿಸಿದ ತಂದೆ: ಹೀಗೊಂದು ವಿಚಿತ್ರ ಘಟನೆ

Update: 2023-03-12 22:42 IST

ಎಡಿನ್ಬರ್ಗ್, ಮಾ.12: ತಂದೆಯೊಬ್ಬ ತನ್ನ ಮಗನನ್ನೇ ಚೂರಿಯಿಂದ ಬೆದರಿಕೆಯೊಡ್ಡಿ ದರೋಡೆ ಮಾಡಲು ಪ್ರಯತ್ನಿಸಿದ ಘಟನೆ ಸ್ಕಾಟ್ಲ್ಯಾಂಡ್ ನ ಗ್ಲಾಸ್ಗೋ ನಗರದಲ್ಲಿ ವರದಿಯಾಗಿದೆ.

17 ವರ್ಷದ ಯುವಕನೊಬ್ಬ ತನ್ನ ಮನೆಯ ಸಮೀಪದ ಎಟಿಎಂನಿಂದ ಹಣ ಡ್ರಾ ಪಡೆಯುತ್ತಿದ್ದಾಗ ಏಕಾಏಕಿ ಎಟಿಎಂ ಕೇಂದ್ರದೊಳಗೆ ನುಗ್ಗಿದ ಮಾಸ್ಕ್ಧಾರಿ ವ್ಯಕ್ತಿಯೊಬ್ಬ ಯುವಕನ ಕುತ್ತಿಗೆಗೆ ಚಾಕು ಒತ್ತಿಹಿಡಿದು, ಹಣ ನೀಡುವಂತೆ ಗದರಿದ್ದಾನೆ. ಆ ಧ್ವನಿ ತನ್ನ ತಂದೆಯದ್ದು ಎಂದು  ಗುರುತು ಹಿಡಿದ ಯುವಕ ತಂದೆಯತ್ತ ತಿರುಗಿದಾಗ ಆರೋಪಿಗೆ ತನ್ನ ತಪ್ಪಿನ ಅರಿವಾಗಿದೆ.

ಹಣದ ಅಗತ್ಯ ಇದ್ದ ಕಾರಣ ಹೀಗೆ ಮಾಡಬೇಕಾಯಿತು ಎಂದು ಆರೋಪಿ ಮಗನ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಈ ಘಟನೆಯ ಬಗ್ಗೆ ಯುವಕ ಪೊಲೀಸರಲ್ಲಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು 

ಆರೋಪಿಗೆ 26 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. 

Similar News