ಉಡುಪಿ: ದ್ವಿ.ಪಿಯುಸಿ ಪರೀಕ್ಷೆಗೆ 17 ಮಂದಿ ಗೈರು
Update: 2023-03-14 19:40 IST
ಉಡುಪಿ, ಮಾ.14: ಮೂರು ವಿಷಯಗಳಿಗೆ ಸೋಮವಾರ ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಒಟ್ಟು 17 ಮಂದಿ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ತಿಳಿಸಿದ್ದಾರೆ.
ರಸಾಯನ ಶಾಸ್ತ್ರ ಪರೀಕ್ಷೆಗೆ ಒಟ್ಟು 6163 ಮಂದಿ ನೊಂದಾಯಿಸಿಕೊಂಡಿದ್ದು, ಇವರಲ್ಲಿ 6147 ಮಂದಿ ಪರೀಕ್ಷೆಗೆ ಹಾಜರಾಗುವ ಮೂಲಕ 16 ಮಂದಿ ಗೈರುಹಾಜರಾಗಿದ್ದಾರೆ. ಬೇಸಿಕ್ ಮ್ಯಾಥ್ಸ್ ಪರೀಕ್ಷೆಗೆ ನೊಂದಾಯಿಸಿಕೊಂಡ ಎಲ್ಲಾ 145 ಮಂದಿ ಹಾಜರಾಗಿದ್ದರೆ, ಸೈಕಾಲಿಜಿ ಪರೀಕ್ಷೆಗೆ ಏಳು ಮಂದಿ ನೊಂದಾಯಿಸಿಕೊಂಡಿದ್ದು, ಇವರಲ್ಲಿ ಆರು ಮಂದಿ ಹಾಜರಾಗಿ ಒಬ್ಬರು ಗೈರುಹಾಜರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.