×
Ad

ಮಾ.15ರಂದು ಮಣಿಪಾಲ ಜಿಸಿಪಿಎಎಸ್‌ನಲ್ಲಿ ಆಸ್ಕರ್ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್’ ಪ್ರದರ್ಶನ

Update: 2023-03-14 19:43 IST

ಉಡುಪಿ : ಪ್ರಪ್ರಥಮ ಆಸ್ಕರ್ ವಿಜೇತ ಭಾರತೀಯ ಕಿರು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಮಾ.15ರ  ಸಂಜೆ 4 ಗಂಟೆಗೆ ಜಿಸಿಪಿಎಎಸ್‌ನ ನೆಲಅಂತಸ್ತಿನ ಉಪನ್ಯಾಸ ಸಭಾಂಗಣ-೨ರಲ್ಲಿ ಪ್ರದರ್ಶನಗೊಳ್ಳಲಿದೆ.

ಮಾನವ-ಪ್ರಕೃತಿ ಸಂಬಂಧವನ್ನು ವ್ಯಾಖ್ಯಾನಿಸುವ ಆನೆ ಮತ್ತು ಮಾನವರ  ಸಂಬಂಧವನ್ನು ಆಧರಿಸಿದ ’ಎಲಿಫೆಂಟ್ ವಿಸ್ಪರರ್’ ಬಹಳಷ್ಟು ವಿಮರ್ಶಾತ್ಮಕ ಮೆಚ್ಚುಗೆಯನ್ನು ಮತ್ತು ಇತ್ತೀಚೆಗೆ ಘೋಷಿಸಲಾದ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

Similar News