​ಉಡುಪಿ: ಪಿಯುಸಿ ಪರೀಕ್ಷೆಗೆ ಎಲ್ಲರೂ ಹಾಜರು

Update: 2023-03-15 15:29 GMT

ಉಡುಪಿ: ಎರಡು ವಿಷಯಗಳಿಗೆ ಬುಧವಾರ ಜಿಲ್ಲೆಯ ೨೮ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ ಎಲ್ಲರೂ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಡಿಡಿಪಿಯು ತಿಳಿಸಿದ್ದಾರೆ.

ಸಂಸ್ಕೃತ ಪರೀಕ್ಷೆಗೆ ಒಟ್ಟು 1380 ಮಂದಿ ನೊಂದಾಯಿಸಿಕೊಂಡಿದ್ದು, ಎಲ್ಲರೂ ಹಾಜರಾದರೆ, ಫ್ರೆಂಚ್ ಭಾಷಾ ಪರೀಕ್ಷೆಗೆ ನೊಂದಾಯಿಸಿಕೊಂಡ ಎಲ್ಲಾ ಮೂವರು ಉತ್ತರ ಬರೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Similar News