ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಸಂಶೋಧನೆ ಬಗ್ಗೆ ಆಸಕ್ತಿ ಬೆಳೆಯಲಿ: ಡಾ.ಎಂ.ಜಿ.ವಿಜಯ
ಉಡುಪಿ : ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹಲವು ಸವಾಲುಗಳನ್ನು ದಾಟಿ ಸದೃಢ ಸಂಸ್ಥೆಯಾಗಿ ಬೆಳೆದು ನಿಂತಿದೆ. ಭಾರತವು ಕೈಗೊಳ್ಳುವ ಬಾಹ್ಯಾಕಾಶ ಯಾನಗಳು ದುಬಾರಿಯೆಂದು ಟೀಕೆಗಳಿವೆ. ಆದರೆ ನಮ್ಮಲ್ಲಿನ ಅದ್ದೂರಿ ಚಿತ್ರಗಳ ಬಜೆಟ್ ಎದುರಿಗೆ ಇದು ಅಂತದ್ದೇನೂ ಅಲ್ಲ. ವಿದ್ಯಾರ್ಥಿ ಜೀವನದಲ್ಲಿ ತರಗತಿಯ ಕ್ಲಾಸುಗಳ ಜೊತೆ ಜೊತೆಗೆ ಸಂಶೋಧನೆ, ಬಾಹ್ಯಾಕಾಶ ವಿಷಯಗಳ ಬಗ್ಗೆ ಸ್ವ ಅಧ್ಯಯನ ಹಾಗೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಹೇಳಿದ್ದಾರೆ.
ಸ್ಪೇಸ್ ಆನ್ ವೀಲ್ಸ್ ಹಾಗೂ ಮೊಬೈಲ್ ಪ್ಲಾನೆಟೋರಿಯಂ ಸಮಾರಂಭದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಬೆಂಗಳೂರಿನ ಇಸ್ರೋ ವಿಜ್ಞಾನಿ ಶ್ರೀನಿವಾಸ್ ಉದ್ಘಾಟಿಸಿ ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಅರುಣ್ ಕುಮಾರ್ ಬಿ., ದ.ಕ. ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಞ ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥೆ ಶೈಲಜಾ ಎಚ್. ಸ್ವಾಗತಿಸಿ, ಉಪನ್ಯಾಸಕಿ ರೋಹಿಣಿ ನಾಯಕ್ ನಿರೂಪಿಸಿದರು.