ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ ಶೇ.100 ಹಾಜರಿ
Update: 2023-03-17 19:38 IST
ಉಡುಪಿ, ಮಾ.17: ಶುಕ್ರವಾರ ನಡೆದ ದ್ವಿತೀಯ ಪಿಯುಸಿಯ ಮೂರು ಪರೀಕ್ಷೆಗಳಿಗೆ ಹೆಸರು ನೊಂದಾಯಿಸಿ ಕೊಂಡಿದ್ದ ಎಲ್ಲಾ ಅಭ್ಯರ್ಥಿಗಳು ಹಾಜರಾಗಿದ್ದಾರೆ ಎಂದು ಉಡುಪಿ ಡಿಡಿಪಿಯು ತಿಳಿಸಿದ್ದಾರೆ.
ಇಂದು ನಡೆದ ಇನ್‌ಫಾರ್ಮೇಶನ್ ಟೆಕ್ನಾಲಜಿ ಪರೀಕ್ಷೆಗೆ ನೊಂದಾಯಿಸಿ ಕೊಂಡಿದ್ದ 65 ವಿದ್ಯಾರ್ಥಿಗಳು, ಅಟೋಮೊಬೈಲ್ ಪರೀಕ್ಷೆಗೆ 50 ಮಂದಿ ಹಾಗೂ ಬ್ಯುಟಿ ಆ್ಯಂಡ್ ವೆಲ್‌ನೆಸ್ ಪರೀಕ್ಷೆಗೆ 23 ಮಂದಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.