ಮಾನಸಿಕ ಅಸ್ವಸ್ಥ ಯುವಕನಿಗೆ ನೆಲೆ ಕಲ್ಪಿಸಿದ ’ಸ್ನೇಹಾಲಯ’

Update: 2023-03-17 14:51 GMT

ಕುಂದಾಪುರ: ತ್ರಾಸಿ ಬೀಚ್ ಬಳಿಯ ಗೂಡಂಗಡಿಯ ಎದುರು ಮಾ.10ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಾನಸಿಕ ಅಸ್ವಸ್ಥ ಹಾಗೂ ಅನಾರೋಗ್ಯ ಪೀಡಿತ ಅಪರಿಚಿತ ಯುವಕನನ್ನು ಪೊಲೀಸರು ಹಾಗೂ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ್ದಾರೆ.

ಗಂಗೊಳ್ಳಿ ಠಾಣೆ ಎಸ್ಸೈ ಜಯಶ್ರೀ ಹೊನ್ನೂರ ಹಾಗೂ ಚಾಲಕ ದಿನೇಶ್, ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ, ಸ್ವಯಂಸೇವಕರಾದ ನದೀಮ್, ಅಬ್ರಾರ್, ಲಿಫ್ತಾನ್ ಮೂಲಕ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆದರ್ಶ ಹೆಬ್ಬಾರ್ ತಮ್ಮ ಸಿಬ್ಬಂದಿ ವರ್ಗದ ಮೂಲಕ 6 ದಿನಗಳ ಕಾಲ ಅಪರಿಚಿತ ಯುವಕನಿಗೆ ಚಿಕಿತ್ಸೆ ಹಾಗೂ ಶೂಶ್ರೋಷೆ ನೀಡಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನೆಲೆ ಶುಕ್ರವಾರ ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರು.

ತದನಂತರ ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್ಸೈಗಳಾದ ವಿನಯ ಕೊರ್ಲ ಹಳ್ಳಿ ಹಾಗೂ ಜಯಶ್ರೀ ಹೊನ್ನೂರ ಆಶ್ರಮಗಳಿಗೆ ಸಂಪರ್ಕಿಸಿ, ಪುನರ್ವಸತಿ ಕಲ್ಪಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದ ಜೋಸೆಫ್ ಕ್ರಾಸ್ತಾ, ಪುನರ್ವಸತಿ ಕಲ್ಪಿಸಲು ಒಪ್ಪಿದ್ದಾರೆ. ಹರೀಶ್ ಕೊಡಪಾಡಿ, ಮಂಜುನಾಥ್ ಸಾಲಿಯಾನ್ ತ್ರಾಸಿ ಸಹಕಾರದಿದೊಂದಿಗೆ ಅಂಬ್ಯುಲೆನ್ಸ್‌ನ ಚಾಲಕರಾದ ಕೃಷ್ಣ ಹಾಗೂ ಇಬ್ರಾಹಿಂ ಯುವಕನನ್ನು ಆಸ್ನೇಹಾಲಯಕ್ಕೆ ಕರೆದೊಯ್ದರು.

Similar News