ಪದವಿ ಪರೀಕ್ಷೆ: ಉಡುಪಿ ನೇತ್ರಜ್ಯೋತಿ ಕಾಲೇಜಿಗೆ 3 ರ‍್ಯಾಂಕ್

Update: 2023-03-17 15:17 GMT

ಉಡುಪಿ, ಮಾ.17: ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯವು 2022ರಲ್ಲಿ ನಡೆಸಿರುವ ಪದವಿ ಪರೀಕ್ಷೆಯಲ್ಲಿ ಉಡುಪಿ ಪ್ರಸಾದ್ ನೇತ್ರಾಲಯದ ಅಂಗ ಸಂಸ್ಥೆಯಾದ ನೇತ್ರಜ್ಯೋತಿ ಅರೆ ವೈದ್ಯಕೀಯ ವಿಜ್ಞಾನ ವಿದ್ಯಾಲಯದ ಮೂರು ಮಂದಿ ವಿದ್ಯಾರ್ಥಿನಿಯರು ರ‍್ಯಾಂಕ್ ಪಡೆದಿದ್ದಾರೆ.

ಬ್ಯಾಚುಲರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಪದವಿಯಲ್ಲಿ ಕೀರ್ತನಾ ಏಳನೆ ರ‍್ಯಾಂಕ್, ವೀಣಾ ನಾಯಕ್ ಎಂಟನೆ ರ‍್ಯಾಂಕ್, ಬಿಎಸ್ಸಿ - ಆಪ್ಟೋಮೆಟ್ರಿ ಯಲ್ಲಿ ರಮ್ಯಾ ಕೆ.ಖಾರ್ವಿ ಎಂಟನೆ ರ‍್ಯಾಂಕ್ ಪಡೆದಿದ್ದಾರೆ. ರ‍್ಯಾಂಕ್ ವಿಜೇತರನ್ನು ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ಕೂಡ್ಲು ಅಭಿನಂದಿಸಿದ್ದಾರೆ. 

Similar News