ಇಮ್ರಾನ್ ಖಾನ್ ಅವರ ಲಾಹೋರ್ ನಲ್ಲಿರುವ ನಿವಾಸಕ್ಕೆ ನುಗ್ಗಿದ ಪೊಲೀಸರು, ಬೆಂಬಲಿಗರ ಮೇಲೆ ಲಾಠಿಚಾರ್ಜ್

Update: 2023-03-18 09:30 GMT

ಲಾಹೋರ್ : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗಾಗಿ ಇಸ್ಲಾಮಾಬಾದ್‌ಗೆ ತೆರಳುತ್ತಿರುವಾಗಲೇ  ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರ ಲಾಹೋರ್‌ನಲ್ಲಿರುವ ಮನೆಗೆ ಪೊಲೀಸರು ಶನಿವಾರ ಪ್ರವೇಶಿಸಿದ್ದಾರೆ ಎಂದು ಅವರ ರಾಜಕೀಯ ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಖಾನ್ ಅವರ ಮನೆಗೆ ನುಗ್ಗಿದಾಗ ಖಾನ್ ಅವರ ಪತ್ನಿ ಬುಶ್ರಾ ಬೇಗಂ ಅವರು ಮನೆಯಲ್ಲಿದ್ದರು.

"ಈ ಮಧ್ಯೆ ಬುಶ್ರಾ ಬೇಗಂ ಒಬ್ಬರೇ ಇರುವ ಜಮಾನ್ ಪಾರ್ಕ್‌ನಲ್ಲಿರುವ ನನ್ನ ಮನೆಯ ಮೇಲೆ ಪಂಜಾಬ್ ಪೊಲೀಸರು ದಾಳಿ ನಡೆಸಿದ್ದಾರೆ. ಅವರು ಯಾವ ಕಾನೂನಿನ ಅಡಿಯಲ್ಲಿ ಇದನ್ನು ಮಾಡುತ್ತಿದ್ದಾರೆ? ಇದು ಲಂಡನ್ ಯೋಜನೆಯ ಭಾಗವಾಗಿದೆಯೇ ’’ ಎಂದು  ಖಾನ್ ಟ್ವೀಟ್ ಮಾಡಿದ್ದಾರೆ.

ಖಾನ್ ಅವರ ಪಕ್ಷ  ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘಟನೆಯ ವೀಡಿಯೋವನ್ನು ಹಂಚಿಕೊಂಡಿದೆ.  ಖಾನ್ ಅವರ ಮನೆಯಲ್ಲಿ ಅವರ ಬೆಂಬಲಿಗರ ಮೇಲೆ  ಪೊಲೀಸರು ಲಾಠಿಚಾರ್ಜ್ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

Similar News