ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಸಜ್ಜು; ರಾಜ್ಯದಾದ್ಯಂತ ಇಂಟರ್ನೆಟ್ ಸ್ಥಗಿತ
Update: 2023-03-18 15:08 IST
ಹೊಸದಿಲ್ಲಿ: ಪ್ರತ್ಯೇಕತಾವಾದಿ ನಾಯಕ ಅಮೃತಪಾಲ್ ಸಿಂಗ್ ನನ್ನು ಬಂಧಿಸಲು ಪಂಜಾಬ್ ಪೊಲೀಸರು ಸಜ್ಜಾಗಿದ್ದು, ರಾಜ್ಯದಾದ್ಯಂತ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು NDTV ವರದಿ ಮಾಡಿದೆ.
ಅಮೃತಪಾಲ್ ಸಿಂಗ್ ನನ್ನು ಬಂಧಿಸಲು ಸಜ್ಜಾಗಿರುವ ಪಂಜಾಬ್ ಪೊಲೀಸರು ಶನಿವಾರ ಆತನ ಆರು ಸಹಚರರನ್ನು ಬಂಧಿಸಿದ್ದು, ಮೊಗಾ ಜಿಲ್ಲೆಯಲ್ಲಿ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದಾರೆ.
ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.
ಅಮೃತಪಾಲ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಜಿ20 ಕಾರ್ಯಕ್ರಮ ಮುಗಿಯುವವರೆಗೆ ರಾಜ್ಯ ಸರಕಾರ ಕಾಯುತ್ತಿದೆ ಎಂದು ಮೂಲಗಳು ಹೇಳಿವೆ.
ಕಳೆದ ವರ್ಷ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ ಹಾಗೂ ಕಾರ್ಯಕರ್ತ ದೀಪ್ ಸಿಧು ಅವರು ಆರಂಭಿಸಿದ "ವಾರಿಸ್ ಪಂಜಾಬ್ ದೇ" ಎಂಬ ಮೂಲಭೂತ ಸಂಘಟನೆಯನ್ನು ಸಿಂಗ್ ಮುನ್ನಡೆಸುತ್ತಿದ್ದಾನೆ.