ಕತರ್ ನ್ಯಾಶನಲ್ ಅಂಡರ್-16 ಕ್ರಿಕೆಟ್ ತಂಡಕ್ಕೆ ಎಸ್ಸಾಮ್ ಮನ್ಸೂರ್ ಆಯ್ಕೆ

Update: 2023-03-18 16:59 GMT

ಮಂಗಳೂರು:  ಕತರ್ ನ್ಯಾಶನಲ್ ಅಂಡರ್-16 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆಯಾಗಿದ್ದಾರೆ.

ಯುಎಇನಲ್ಲಿ  ನಡೆಯಲಿರುವ ಆರು ರಾಷ್ಟ್ರಗಳ ಎಸಿಸಿ ಟೂರ್‌ನಲ್ಲಿ  ಎಸ್ಸಾಮ್ ಅವಕಾಶ ಪಡೆದಿದ್ದಾರೆ.  ಆಲ್ ರೌಂಡರ್‌ (ಎಡಗೈ ಬ್ಯಾಟರ್  ಮತ್ತು ಬಲಗೈ ಮಧ್ಯಮ ವೇಗಿ ಬೌಲರ್) ಆಗಿರುವ ಎಸ್ಸಾಮ್ ಅವರು ಸೇರಿದಂತೆ ಕರ್ನಾಟಕದ ಇಬ್ಬರು ತಂಡಕ್ಕೆ ಆಯ್ಕೆಯಾಗಿದ್ದಾರೆ

ಐದಾರು ಅಕಾಡಮಿ, ಸ್ಕೂಲ್‌ನ 1,000ಕ್ಕೂ ಅಧಿಕ ಮಂದಿ ಅವಕಾಶಕ್ಕಾಗಿ ಪೈಪೋಟಿ ನಡೆಸಿದ್ದರು. ಎಸ್ಸಾಮ್ ಸೇರಿದಂತೆ ಕರ್ನಾಟಕದ ಇಬ್ಬರು ಕತರ್ ನ್ಯಾಶನಲ್ ಅಂಡರ್-16 ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅವನಿತ್ ಅವಕಾಶ ಪಡೆದ ಇನ್ನೊಬ್ಬ ಆಟಗಾರ.

ಎಸ್ಸಾಮ್ ಅವರ ಸಾಧನೆಯನ್ನು ಗುರುತಿಸಿ  ತುಳುಕೂಟದ ಜಾತ್ರೆಯಲ್ಲಿ ಅಭಿನಂದಿಸಲಾಯಿತು.

ದೋಹಾ ಕತರ್‌ನಲ್ಲಿ ನೆಲೆಸಿರುವ ಇಂಜಿನಿಯರ್ ಮನ್ಸೂರ್ ಹಸನಬ್ಬ ಹೆಂತಾರ್ ಮತ್ತು ರಝಿಯಾ ಸುಲೈಮಾನ್ ಸಾಲ್ಮರ ದಂಪತಿಯ ಪುತ್ರ ಎಸ್ಸಾಮ್ ಮನ್ಸೂರ್ ಅವರು ವಾರಿಯರ್ಸ್ ಕ್ರಿಕೆಟ್ ಅಕಾಡಮಿಯಲ್ಲಿ ತರಬೇತಿ  ಪಡೆಯುತ್ತಿದ್ದಾರೆ.

ಕೋಚ್ ಎನ್.ಎಂ.ಸಾದಿಕ್ ಮತ್ತು ಅಬ್ದುಲ್ ಶಾಲಂ ಮಂಗಳೂರು ಮತ್ತು ಶ್ರೀಲಂಕಾದ ಕೋಚ್‌ಗಳಾದ ಸಮನ್ ಮತ್ತು ತಾರಿಕ್ ಮಾರ್ಗದರ್ಶನದಲ್ಲಿ ಎಸ್ಸಾಮ್ ಮನ್ಸೂರ್  ಉತ್ತಮ ಆಲ್‌ ರೌಂಡರ್ ಆಗಿ ರೂಪುಗೊಂಡಿದ್ದಾರೆ.
ಇದೀಗ ಕತರ್  ಐಡಿಯಲ್ ಇಂಡಿಯನ್ ಸ್ಕೂಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿಯಾಗಿರುವ ಎಸ್ಸಾಮ್ ಮನ್ಸೂರ್  ಮಂಗಳೂರಿನ ಸೈಂಟ್  ಥೆರೆಸಾ ಐಸಿಎಸ್‌ಇ ಶಾಲೆಯಲ್ಲಿ 6ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದಾರೆ.

Similar News