2ನೇ ಏಕದಿನ: ಭಾರತ 117 ರನ್‌ಗೆ ಆಲೌಟ್

ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿ

Update: 2023-03-19 11:34 GMT

 ವಿಶಾಖಪಟ್ಟಣ, ಮಾ.19: ವೇಗದ ಬೌಲರ್ ಮಿಚೆಲ್ ಸ್ಟಾರ್ಕ್(5-53) ನೇತೃತ್ವದ ಆಸ್ಟ್ರೇಲಿಯ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡ ದ್ವಿತೀಯ ಏಕದಿನ ಪಂದ್ಯದಲ್ಲಿ 26 ಓವರ್‌ಗಳಲ್ಲಿ ಕೇವಲ 117 ರನ್‌ಗೆ ಆಲೌಟಾಗಿದೆ.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.

ಬ್ಯಾಟಿಂಗ್ ವೈಫಲ್ಯಕ್ಕೊಳಗಾದ ಭಾರತದ ಪರ ವಿರಾಟ್ ಕೊಹ್ಲಿ(31 ರನ್, 35 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರೆ, ಅಕ್ಷರ್ ಪಟೇಲ್ ಔಟಾಗದೆ 29 ರನ್, ರವೀಂದ್ರ ಜಡೇಜ 16 ರನ್ ಗಳಿಸಿದರು. ಆಸೀಸ್ ಪರ ಸ್ಟಾರ್ಕ್(5-53)ಯಶಸ್ವಿ ಪ್ರದರ್ಶನ ನೀಡಿದರೆ, ಸೀನ್ ಅಬಾಟ್(3-23) ಹಾಗೂ ನಥಾನ್ ಎಲ್ಲಿಸ್(2-13) ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಸರಣಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ ಸದ್ಯ 1-0 ಮುನ್ನಡೆಯಲ್ಲಿದೆ.
 

Similar News