ಮೊಗವೀರ ಸಮುದಾಯಕ್ಕೆ ಆನ್‌ಲೈನ್ ವಿವಾಹ ವೇದಿಕೆ: ‘ತುಳುನಾಡ್ ಮ್ಯಾಟ್ರಿಮೋನಿ ಡಾಟ್‌ಕಾಮ್’ ಲೋಕಾರ್ಪಣೆ

Update: 2023-03-20 15:51 GMT

ಉಡುಪಿ: ತುಳುನಾಡಿನ ಮೊಗವೀರ ಸಮುದಾಯಕ್ಕಾಗಿಯೇ ಮೀಸಲಾದ ಆನ್‌ಲೈನ್ ವಿವಾಹ ವೇದಿಕೆ ‘ತುಳುನಾಡ್ ಮ್ಯಾಟ್ರಿಮೋನಿ ಡಾಟ್‌ಕಾಮ್’ ಇಂದು ಲೋಕಾರ್ಪಣೆಗೊಂಡಿತು.

ತುಳುಭಾಷೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕಳೆದೆರಡು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ‘ತುಳುನಾಡ ಧ್ವನಿ’ ತುಳು ಅಂತರ್ಜಾಲ ಪತ್ರಿಕೆ, ವೆಬ್‌ನ್ಯೂಸ್, ಯೂಟ್ಯೂಬ್ ಚಾನೆಲ್ ಬಳಿಕ ಇದೀಗ  ಮೊಗವೀರ ಸಮುದಾಯದ ಅವಿವಾಹಿತರಿಗೆ ವಿವಾಹ ವೇದಿಕೆಯೊಂದನ್ನು ಕಲ್ಪಿಸಿಕೊಡಲು ಇದನ್ನು ಪ್ರಾರಂಭಿಸ ಲಾಗಿದೆ ಎಂದು ತುಳುನಾಡ ಧ್ವನಿಯ  ಯಶೋಧ ಕೇಶವ್ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಡುಪಿಯ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ತುಳುನಾಡ್ ಮ್ಯಾಟ್ರಿಮೋನಿ ಡಾಟ್‌ಕಾಮ್‌ನ್ನು ಲೋಕಾರ್ಪಣೆ ಗೊಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ, ಮಣಿಪಾಲದ ಉದ್ಯಮಿ ಸರಿತಾ ಸಂತೋಷ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಈ ಪೋರ್ಟಲ್‌ನ್ನು ನಿರ್ಮಿಸಿದ ಕುಂದಾಪುರ ಪೋರ್ಥ್ ಪೋಕಸ್‌ನ ನಿರ್ದೇಶಕ ಗೌತಮ್ ನಾವಡ ಈ ಸಂದರ್ಭದಲ್ಲಿ ಉಪಸ್ಥಿತರಿದು ಶುಭ ಹಾರೈಸಿದರು.

ಮೊಗವೀರ ಸಮುದಾಯದ ಅವಿವಾಹತ ಯುವಕ-ಯುವತಿಯರಿಗೆ  ಉತ್ತಮ  ವಿವಾಹ ವೇದಿಕೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ. ಈ ವೇದಿಕೆಯಲ್ಲಿ ಸೂಕ್ತವಾದ  ಜೀವನಸಂಗಾತಿ ಯನ್ನು  ಹುಡುಕಿಕೊಳ್ಳಲು  ಯುವಕ ಯುವತಿಯರಿಗೆ ವಿಪುಲವಾದ ಅವಕಾಶವಿದೆ. ತುಳುನಾಡ್ ಮ್ಯಾಟ್ರಿಮೋನಿ ಯಲ್ಲಿ ಮೊಗವೀರ ಸಮಾಜದ ಯುವಕ- ಯುವತಿಯರು ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಯಶೋಧ ಕೇಶವ ತಿಳಿಸಿದರು.

ವಿವಾಹಕ್ಕಾಗಿ ನೊಂದಾಯಿಸಿಕೊಳ್ಳುವ ಯುವಕ-ಯುವತಿಯರು ನೀಡುವ ವಿವರಗಳನ್ನು, ಅವರ ಪ್ರೊಫೈಲ್‌ಗಳು, ಸಂಪರ್ಕ ವಿವರಗಳು ಮತ್ತು ಇತರ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಇದರಲ್ಲಿ ಅವಕಾಶಗಳಿವೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅವಿವಾಹಿತರಿಗೆ ತಮ್ಮ ಸರಿಯಾದ ಜೀವನ ಸಂಗಾತಿಯನ್ನು ಹುಡುಕಿಕೊಳ್ಳಲು ತುಳುನಾಡ್ ಮ್ಯಾಟ್ರಿಮೋನಿ ಒಂದು ಉತ್ತಮ ವೇದಿಕೆಯಾಗಿದೆ ಎಂದವರು ಹೇಳಿದರು.

ಕುಂದಾಪುರದ ವಿ.ಗೌತಮ್ ನಾವಡ ಪೋರ್ಟಲನ್ನು ತಯಾರಿಸಿದ್ದು, ಇದರ ವೈಶಿಷ್ಟ್ಯಗಳನ್ನು ವಿವರಿಸಿದರು. ತುಳುನಾಡಿನ ಮೊಗವೀರ ಸಮುದಾಯದ ಅವಿವಾಹಿತ ಯುವಕ ಯುವತಿಯರು ತುಳುನಾಡ್ ಮ್ಯಾಟ್ರಿಮೋನಿಯ ಸದುಪಯೋಗ ಪಡಿಸಿಕೊಳ್ಳುವಂತೆ ಯಶೋಧ ಕೇಶವ್ ವಿನಂತಿಸಿದರು. 

Similar News