ಬ್ರಿಟನ್: ಭಾರತೀಯ ಹೈಕಮಿಷನ್ ನ ಕಿಟಕಿ ಒಡೆದ ಸಿಖ್ ಪ್ರತಿಭಟನಾಕಾರರು

Update: 2023-03-20 16:52 GMT

ಲಂಡನ್, ಮಾ.20: ಸಿಖ್ ಪ್ರತಿಭಟನಾಕಾರರು ನಡೆಸಿದ ಪ್ರತಿಭಟನೆಯಲ್ಲಿ ಲಂಡನ್ನಲ್ಲಿರುವ ಭಾರತದ ಹೈಕಮಿಷನ್ನ ಕಿಟಕಿಗಳು ಒಡೆದು ಇಬ್ಬರು ಭದ್ರತಾ ಸಿಬಂದಿಗೆ ಸ್ವಲ್ಪ ಗಾಯವಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಲಂಡನ್ ನ ಮೆಟ್ರೊಪಾಲಿಟನ್ ಪೊಲೀಸರು  ಓರ್ವ ಶಂಕಿತನನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಈ ಮಧ್ಯೆ, ಲಂಡನ್ನ ಭಾರತೀಯ ಹೈಕಮಿಷನ್ ಇರುವ ಕಟ್ಟಡದ ಬಾಲ್ಕನಿಯಿಂದ ಭಾರತೀಯ ಧ್ವಜವನ್ನು ಓರ್ವ ವ್ಯಕ್ತಿ ಕೆಳಗಿಳಿಸುತ್ತಿರುವ ಮತ್ತು ಕೆಳಗೆ ನಿಂತಿದ್ದವರು `ಖಲಿಸ್ತಾನ್' ಧ್ವಜವನ್ನು ಬೀಸುತ್ತಾ ಆತನನ್ನು ಹುರಿದುಂಬಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೈಕಮಿಷನ್ನ ಸಿಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬರುವಷ್ಟರಲ್ಲಿ ಅಲ್ಲಿದ್ದವರು ತೆರಳಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ಬಗ್ಗೆ ಭಾರತದಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಕ್ರಿಸ್ತಿನಾ ಸ್ಕಾಟ್ರನ್ನು ಕರೆಸಿಕೊಂಡು ವಿವರಣೆ ಕೇಳಲಾಗಿದೆ ಎಂದು ಭಾರತ ಸರಕಾರ ಹೇಳಿದೆ.

Similar News