ಖಾಲಿಸ್ತಾನಿ ನಾಯಕ ಅಮೃತ್ ಪಾಲ್ ಸಿಂಗ್ ಗಾಗಿ ಮುಂದುವರಿದ ಹುಡುಕಾಟ

Update: 2023-03-21 04:58 GMT

ಹೊಸದಿಲ್ಲಿ: ಖಾಲಿಸ್ತಾನಿ ನಾಯಕ   ಅಮೃತ್ ಪಾಲ್ ಸಿಂಗ್ ಹುಡುಕಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಆತನ ಚಿಕ್ಕಪ್ಪ ಹರ್ಜಿತ್ ಸಿಂಗ್ ರನ್ನು ಇಂದು ಬೆಳಗ್ಗೆ ಅಸ್ಸಾಂನ ದಿಬ್ರುಗಢ್‌ಗೆ ಕರೆದೊಯ್ಯಲಾಯಿತು. ರವಿವಾರ, ಅವರ ಇತರ ನಾಲ್ವರು ಸಹಚರರನ್ನು ದಿಬ್ರುಗಢ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಅಮೃತಪಾಲ್ ಸಿಂಗ್ ಅವರ ಚಿಕ್ಕಪ್ಪ ಹಾಗೂ  ಇತರ ಆರು ಸಹಚರರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ, ಇದು ದೇಶದಾದ್ಯಂತ ಯಾವುದೇ ಜೈಲಿನಲ್ಲಿ ಶಂಕಿತರನ್ನು ಬಂಧಿಸಲು ಪೊಲೀಸರಿಗೆ ಅವಕಾಶ ನೀಡುತ್ತದೆ.

ಅಮೃತಪಾಲ್ ಸಿಂಗ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯನ್ನು ಉಲ್ಲೇಖಿಸಿ ಹೊಸ ಎಫ್‌ಐಆರ್‌ನೊಂದಿಗೆ ಪ್ರಕರಣವನ್ನು ಭಯೋತ್ಪಾದಕ ತನಿಖೆಯಾಗಿ ತೆಗೆದುಕೊಳ್ಳಲು ಕೇಂದ್ರವು ಮುಂದಾಗುತ್ತಿದೆ. ಹೊಸ ಪ್ರಕರಣದಲ್ಲಿ ಖಾಲಿಸ್ತಾನಿ ನಾಯಕನನ್ನು "ಆರೋಪಿ ನಂಬರ್ ಒನ್" ಎಂದು ಹೆಸರಿಸಲಾಗಿದೆ.

Similar News