ರಾಯ್ ಬರೇಲಿ ಸ್ಟೇಡಿಯಮ್ ಗೆ ಹಾಕಿ ಸ್ಟಾರ್ ರಾಣಿ ರಾಂಪಾಲ್ ಹೆಸರು

ಈ ಗೌರವ ಪಡೆದ ಮೊದಲ ಆಟಗಾರ್ತಿ

Update: 2023-03-21 07:25 GMT

ಹೊಸದಿಲ್ಲಿ: ರಾಯ್ ಬರೇಲಿಯಲ್ಲಿರುವ ಸ್ಟೇಡಿಯಮ್ ಗೆ ಭಾರತದ ಹಾಕಿ ತಂಡದ ಸ್ಟಾರ್ ಆಟಗಾರ್ತಿ ರಾಣಿ ರಾಂಪಾಲ್ ಅವರ ಹೆಸರಿಡಲಾಗಿದೆ.ರಾಣಿ ಕ್ರೀಡೆಯಲ್ಲಿ ತಮ್ಮ ಹೆಸರಿನ ಕ್ರೀಡಾಂಗಣವನ್ನು ಹೊಂದಿರುವ ಮೊದಲ ಮಹಿಳೆಯಾಗಿದ್ದಾರೆ.

ಎಂಸಿಎಫ್ ರಾಯ್ ಬರೇಲಿ ಹಾಕಿ ಸ್ಟೇಡಿಯಮ್  ಅನ್ನು 'ರಾಣಿ ಗರ್ಲ್ಸ್ ಹಾಕಿ ಟರ್ಫ್' ಎಂದು ಮರುನಾಮಕರಣ ಮಾಡಲಾಗಿದೆ.

ರಾಣಿ ತಮ್ಮ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ,

"ಹಾಕಿಗೆ ನನ್ನ ಕೊಡುಗೆಯನ್ನು ಗೌರವಿಸಲು ಎಂಸಿಎಫ್ ರಾಯ್ಬರೇಲಿ ಹಾಕಿ ಕ್ರೀಡಾಂಗಣವನ್ನು "ರಾಣಿ ಗರ್ಲ್ಸ್ ಹಾಕಿ ಟರ್ಫ್ ಎಂದು ಮರುನಾಮಕರಣ ಮಾಡಲಾಗಿದೆ. ನನ್ನ ಸಂತೋಷ ಹಾಗೂ  ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ" ಎಂದು ರಾಣಿ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.

 "ನನ್ನ ಹೆಸರಲ್ಲಿ ಒಂದು ಕ್ರೀಡಾಂಗಣವನ್ನು ಹೊಂದಿರುವ ಮೊದಲ ಮಹಿಳಾ ಹಾಕಿ ಆಟಗಾರ್ತಿಯಾಗಿರುವುದು ನನಗೆ ಹೆಮ್ಮೆಯ ಹಾಗೂ  ಭಾವನಾತ್ಮಕ ಕ್ಷಣವಾಗಿದೆ. ನಾನು ಇದನ್ನು ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅರ್ಪಿಸುತ್ತೇನೆ ಹಾಗೂ ಇದು ಮುಂದಿನ ತಲೆಮಾರಿನ ಹಾಕಿ ಆಟಗಾರ್ತಿಯರಿಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದು ರಾಣಿ ಹೇಳಿದರು.

" ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ರಾಣಿ ಅವರು 22 ಸದಸ್ಯರ ತಂಡದಲ್ಲಿ ಸೇರ್ಪಡೆಯಾಗುವ ಮೂಲಕ  ಭಾರತ ತಂಡಕ್ಕೆ ಮರಳಿದರು.

ಎಫ್‌ಐಎಚ್ ಮಹಿಳಾ ಹಾಕಿ ಪ್ರೊ ಲೀಗ್ 2021-22ರಲ್ಲಿ ಬೆಲ್ಜಿಯಂ ವಿರುದ್ಧ ಕೊನೆಯ ಬಾರಿ ಆಡಿದ ನಂತರ 28ರ ವಯಸ್ಸಿನ ರಾಣಿ ತಂಡಕ್ಕೆ ಮರಳಿದರು, ಅಲ್ಲಿ ಅವರು ಭಾರತಕ್ಕಾಗಿ ತಮ್ಮ 250 ನೇ ಪಂದ್ಯ ಆಡಿದರು.

Similar News